ಕೋಲ್ಕತ್ತಾ: ಬಿಜೆಪಿಯ ವೋಟ್ ಬ್ಯಾಂಕ್ ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಿರುಗೇಟು ನೀಡಿದ್ದಾರೆ.
ಟಿಎಂಸಿಯಲ್ಲಿ ನಾಯಕರಿಲ್ಲದ ಕಾರಣ ಬಿಜೆಪಿಯಲ್ಲಿ ಹುಡುಕುತ್ತಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ಸೇರಿ ಯಾವುದೇ ವ್ಯಕ್ತಿಯ ಮತಗಳನ್ನು ಕಸಿಯಲು ಬಿಜೆಪಿಗೆ ಸಾಧ್ಯವಿಲ್ಲ. ಈ ಮತಗಳೆಲ್ಲ ಪ್ರಧಾನಿ ಮೋದಿಯವರಿಗೆ ಮಾತ್ರ ಮೀಸಲಾಗಿವೆ. ಜನರೆಲ್ಲ ಪ್ರಧಾನಿ ಮೋದಿ ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದಿದ್ದಾರೆ.
ಗುರುವಾರ ಅಭಿಷೇಕ್ ಬ್ಯಾನರ್ಜಿ, ಮುರ್ಷಿದಾಬಾದ್ನಲ್ಲಿ ರಾಜಕೀಯ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ನಾಯಕರು, ಬಹುತೇಕ ಶಾಸಕರು ಟಿಎಂಸಿ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಟಿಎಂಸಿ ಕಚೇರಿ ಬಾಗಿಲು ಮುಚ್ಚಿದ್ದೇವೆ. ಒಂದು ವೇಳೆ ಬಾಗಿಲು ತೆರೆದರೆ ಬಿಜೆಪಿ ಖಂಡಿತವಾಗಿಯೂ ನಿರ್ನಾಮವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಸಾರಿಗೆ ವಿಮಾನಗಳ ಖರೀದಿ ಒಪ್ಪಂದ ಮಾಡಿಕೊಳ್ಳುತ್ತಾ ರಕ್ಷಣಾ ಇಲಾಖೆ?
ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಮಾಜಿ ಸಂಸದ ಬಾಬುಲ್ ಸುಪ್ರಿಯೋ ಅವರು ಸೆಪ್ಟೆಂಬರ್ 18 ರಂದು ಔಪಚಾರಿಕವಾಗಿ ಟಿಎಂಸಿಗೆ ಸೇರಿದರು. ಬಾಬುಲ್ ಸುಪ್ರಿಯೋ ಮತ್ತು ಮುಕುಲ್ ರಾಯ್ ಅವರಲ್ಲದೇ, ಮೂವರು ಬಿಜೆಪಿ ಶಾಸಕರು ಕೂಡ ಟಿಎಂಸಿಗೆ ಸೇರಿದ್ದಾರೆ.