ಕರ್ನಾಟಕ

karnataka

ETV Bharat / bharat

ನಿರೀಕ್ಷೆಯಂತೆ​ ಶಾ ರ‍್ಯಾಲಿಯಲ್ಲಿ ಮಮತಾಗೆ ಟಾಂಗ್​ ಕೊಟ್ಟ ’ಅಧಿಕಾರಿ’: 11 ಎಂಎಲ್​​ಎಗಳು ಬಿಜೆಪಿ ಸೇರ್ಪಡೆ

ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡರು.

ಸುವೇಂದು ಅಧಿಕಾರ ಬಿಜೆಪಿಗೆ ಸೇರ್ಪಡೆ
ಸುವೇಂದು ಅಧಿಕಾರ ಬಿಜೆಪಿಗೆ ಸೇರ್ಪಡೆ

By

Published : Dec 19, 2020, 3:13 PM IST

Updated : Dec 19, 2020, 3:39 PM IST

ಕೋಲ್ಕತ್ತಾ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಸುವೇಂದು ಅಧಿಕಾರ ಬಿಜೆಪಿಗೆ ಸೇರ್ಪಡೆಗೊಂಡರು. ಇವರ ಜತೆ ಐವರು ಎಂಎಲ್​ಎಗಳು ಸಹ ಕಮಲ ಮುಡಿದರು. ಇತ್ತೀಚೆಗಷ್ಟೇ ಅಧಿಕಾರಿ ತೃಣಮೂಲ ಕಾಂಗ್ರೆಸ್​​​​​​ಗೆ ರಾಜೀನಾಮೆ ನೀಡಿದ್ದರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಅವರ ಪತ್ರವನ್ನ ಅಲ್ಲಿನ ಸ್ಪೀಕರ್​ ತಿರಸ್ಕಾರ ಮಾಡಿದ್ದಾರೆ.

ಅಮಿತ್​ ಶಾ ರ್ಯಾಲಿಯಲ್ಲಿ ಬಿಜೆಪಿ ಸೇರ್ಪಡೆ ಆಗುವ ಮೂಲಕ ಮಮತಾ ಬ್ಯಾನರ್ಜಿಗೆ ಸುವೇಂದು ಸೆಡ್ಡು ಹೊಡೆದಿದ್ದಾರೆ. ಹಿಂದಿನ ತಿಂಗಳಷ್ಟೇ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್​​ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ನಂತರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹರಿದಾಡುತ್ತಿದ್ದವು. ಅದು ಈಗ ನಿಜವಾಗಿದೆ.

ಇದನ್ನೂ ಓದಿ:ಬಜೆಟ್ 2021-22: ಆರೋಗ್ಯ, ಡಿಜಿಟಲ್ ಇಂಡಿಯಾ, ಮೂಲಸೌಕರ್ಯ, ಉದ್ಯೋಗಗಳತ್ತ ವಿತ್ತ ಸಚಿವೆಯ ಚಿತ್ತ

13 ಜನ ಬಿಜೆಪಿ ಸೇರ್ಪಡೆ;ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ 11 ಶಾಸಕರು, ಓರ್ವ ಹಾಲಿ ಸಂಸದ ಮತ್ತು ಓರ್ವ ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಶಾಸಕರಾದ ಸುವೇಂದು ಅಧಿಕಾರಿ, ತಪಸಿ ಮೊಂಡಾಲ್, ಅಶೋಕ್ ದಿಂಡಾ, ಸುದೀಪ್ ಮುಖರ್ಜಿ, ಸೈಕತ್ ಪಂಜ, ಶಿಲ್ಭದ್ರ ದತ್ತ, ದೀಪಾಲಿ ಬಿಸ್ವಾಸ್, ಸುಕ್ರಾ ಮುಂಡಾ, ಶ್ಯಾಮಪ್ಡಾ ಮುಖರ್ಜಿ, ಬಿಸ್ವಾಜಿತ್ ಕುಂದು ಮತ್ತು ಬನಸ್ರಿ ಮೈಟಿ ಬಿಜೆಪಿಗೆ ಸೇರಿದ್ದಾರೆ.

ಪಶ್ಚಿಮ ಮೇದಿನಿಪುರದಲ್ಲಿ ಪುರ್ಬಾ ಬರ್ಧಮನ್​ನ ಟಿಎಂಸಿ ಸಂಸದ ಸುನಿಲ್ ಮೊಂಡಾಲ್ ಮತ್ತು ಮಾಜಿ ಸಂಸದ ದಸರಥ್ ಟಿರ್ಕಿ ಸಹ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Last Updated : Dec 19, 2020, 3:39 PM IST

ABOUT THE AUTHOR

...view details