ಕರ್ನಾಟಕ

karnataka

ETV Bharat / bharat

KMC election: ಮರುಚುನಾವಣೆಗೆ ಸುವೇಂದು ಒತ್ತಾಯ.. ದೀದಿ ಸರ್ಕಾರವನ್ನು ಕಿಮ್​ ಆಡಳಿತಕ್ಕೆ ಹೋಲಿಸಿದ ಅಧಿಕಾರಿ - ಕೊಲ್ಕತ್ತಾ ಮುನ್ಸಿಪಲ್​ ಕಾರ್ಪೊರೇಷನ್​​ ಚುನಾವಣೆ

KMC election-2021: ಕೋಲ್ಕತ್ತಾ ಮಹಾಣಗರ ಪಾಲಿಕೆ ಚುನಾವಣೆಯ ಒಟ್ಟು 144 ವಾರ್ಡ್​​​ಗಳಿಗೆ ಮರು ಚುನಾವಣೆ ನಡೆಸುವಂತೆ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಒತ್ತಾಯಿಸಿದ್ದಾರೆ.

suvendu-adhikari-demands-total-kmc-repolls
ಸುವೇಂದು ಅಧಿಕಾರಿ

By

Published : Dec 20, 2021, 9:47 AM IST

ಕೋಲ್ಕತ್ತಾ : ಭಾನುವಾರ ನಡೆದ ಕೋಲ್ಕತ್ತಾ ಮುನ್ಸಿಪಲ್​ ಕಾರ್ಪೊರೇಷನ್​​ ಚುನಾವಣೆಯ ಒಟ್ಟು 144 ವಾರ್ಡ್​​​ಗಳ ಮರು ಚುನಾವಣೆ ನಡೆಸುವಂತೆ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಒತ್ತಾಯಿಸಿದ್ದಾರೆ. ಅಲ್ಲದೆ, ತೃಣಮೂಲ ಕಾಂಗ್ರೆಸ್​ ಆಡಳಿತವನ್ನು ಉತ್ತರ ಕೊರಿಯಾದ ಕಿಮ್​ ಜಾಂಗ್​​ ಉನ್​ ಆಡಳಿತಕ್ಕೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಕಾಣೆಯಾಗಿದೆ. ರಾಜ್ಯದಲ್ಲಿ ಉತ್ತರ ಕೊರಿಯಾದಂತಹ ಆಡಳಿತ ಚಾಲ್ತಿಯಲ್ಲಿದೆ. ಕೆಎಂಸಿ ಚುನಾವಣಾ ಪ್ರಕ್ರಿಯೆ ಸಂಪೂರ್ಣ ನಾಟಕವಾಗಿದೆ ಎಂದು ಅಧಿಕಾರಿ ಹೇಳಿದರು. ಅಲ್ಲದೆ ತಮ್ಮ ಮೇಲೆ, ಪೊಲೀಸ್ ಸಿಬ್ಬಂದಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲ ಜಗದೀಪ್​​​ ಧನಕರ್​ ಅವರನ್ನು ಭೇಟಿಯಾದ ಅಧಿಕಾರಿ, ಕೆಎಂಸಿಯ ಎಲ್ಲಾ 144 ವಾರ್ಡ್‌ಗಳ ಮರುಮತದಾನಕ್ಕೆ ಒತ್ತಾಯಿಸಿದರು. ನಂತರ ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಮರುಚುನಾವಣೆಗೆ ಆಗ್ರಹಿಸಿದರು.

ABOUT THE AUTHOR

...view details