ಮುಂಬೈ:ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರನ್ನು ಎನ್ಐಎ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ಎನ್ಐಎ ಶನಿವಾರ ಬೆಳಿಗ್ಗೆಯಿಂದ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ತಡರಾತ್ರಿ ಸಚಿನ್ ವಝೆ ಅವರನ್ನು ಬಂಧಿಸಿತ್ತು. ಇಂದು ಕೂಡ ಮುಂಬೈ ಪೊಲೀಸರು ಸೇರಿದಂತೆ ಕೆಲ ಅಧಿಕಾರಿಗಳು ವಿಚಾರಣೆ ನಡೆಸಿ ರಿಮ್ಯಾಂಡ್ಗಾಗಿ ನ್ಯಾಯಾಲಯದ ಮುಂದೆ ಸಚಿನ್ ವಝೆ ಅವರನ್ನು ಹಾಜರು ಪಡಿಸಲಿದೆ.