ಕರ್ನಾಟಕ

karnataka

ETV Bharat / bharat

ಶ್ರೀನಗರದಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ: ಡಬ್ಬಿಯೊಳಗೆ ಸಿಕ್ಕಿದ್ದೇನು? - ಜಮ್ಮು ಮತ್ತು ಕಾಶ್ಮೀರ ಪೊಲೀಸ್

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬಾಂಬ್ ನಿಷ್ಕ್ರಿಯ ದಳವು ಅನುಮಾನಾಸ್ಪದ ಡಬ್ಬಿ(ಬಾಕ್ಸ್​)ಅನ್ನು ವಶಪಡಿಸಿಕೊಂಡಿದೆ. ಈ ಡಬ್ಬಿಯಲ್ಲಿ ತಂತಿಗಳಿದ್ದು, ಐಇಡಿ ಬಾಂಬ್​ ಇಲ್ಲವೆಂದು ಎಂದು ತಿಳಿದುಬಂದಿದೆ.

box
box

By

Published : Apr 5, 2021, 10:18 PM IST

ಶ್ರೀನಗರ (ಜಮ್ಮು ಕಾಶ್ಮೀರ):ಶ್ರೀನಗರದ ಖಾನಾರ್ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬಾಂಬ್ ನಿಷ್ಕ್ರಿಯ ದಳ ಸೋಮವಾರ ಅನುಮಾನಾಸ್ಪದ ಬಾಕ್ಸನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಇಂದು ಸಂಜೆ 6 ಗಂಟೆ ಸುಮಾರಿಗೆ ಖಾನಾರ್ ಪ್ರದೇಶದಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದ ಡಬ್ಬಿಯೊಂದು ಬಿದ್ದಿರುವ ಬಗ್ಗೆ ನಮಗೆ ಕರೆ ಬಂತು. ಹೊರಗಿನಿಂದ ಕೆಲವು ತಂತಿಗಳು ಗೋಚರಿಸಿರುವುದರಿಂದ ಬಾಕ್ಸ್​ನಲ್ಲಿ ಐಇಡಿ ಅಳವಡಿಸಿರಬಹುದೆಂದು ನಾವು ಅಂದುಕೊಂಡಿದ್ದೆವು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆದರೆ ಬಾಕ್ಸ್​ನಲ್ಲಿ ತಂತಿಗಳಿವೆ, ಐಇಡಿ ಇಲ್ಲವೆಂದು ಬಾಂಬ್ ನಿಷ್ಕ್ರಿಯ ದಳ ಹೇಳಿದೆ. ಡಬ್ಬಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ" ಎಂದು ಅವರು ಹೇಳಿದರು.

ಸ್ಥಳೀಯರಲ್ಲಿ ಭಯ ಉಂಟುಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಈ ಪ್ರದೇಶದಲ್ಲಿ ಬಾಕ್ಸ್​ಅನ್ನು ಇರಿಸಿದ್ದಾರೆ ಎಂದು ಪೊಲೀಸರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details