ಕರ್ನಾಟಕ

karnataka

ETV Bharat / bharat

ಜಮ್ಮುವಿನ ನರ್ವಾಲ್‌ನಲ್ಲಿ ನಿಗೂಢ ಸ್ಫೋಟ: ಜನರಲ್ಲಿ ಭಯದ ವಾತಾವರಣ - Petrol station damaged due to explosion

ಜಮ್ಮುವಿನ ನರ್ವಾಲ್ ಪ್ರದೇಶದ ಪೆಟ್ರೋಲ್ ಬಂಕ್​ನಲ್ಲಿ ನಿಗೂಢ ಸ್ಫೋಟದ ಸದ್ದು ಕೇಳಿಬಂದಿದೆ. ಸ್ಫೋಟದಿಂದ ಪೆಟ್ರೋಲ್ ಪಂಪ್ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Suspicious blast in jammu
ನರ್ವಾಲ್ ಸ್ಫೋಟ ತೋರಿಸಲಾಗಿದೆ ನರ್ವಾಲ್‌ನಲ್ಲಿ ನಿಗೂಢ ಸ್ಫೋಟ

By

Published : May 2, 2023, 4:41 PM IST

ಜಮ್ಮು:ಜಮ್ಮುವಿನ ನರ್ವಾಲ್ ಪ್ರದೇಶದ ಬಳಿಯಿರುವ ಪೆಟ್ರೋಲ್ ಬಂಕ್​ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಸ್ಥಳೀಯರ ಪ್ರಕಾರ, ಈ ಸ್ಫೋಟದ ಶಬ್ದವು ತುಂಬಾ ದೂರದವರೆಗೆ ಕೇಳಿಸಿದೆ. ಸ್ಫೋಟದಿಂದ ಪೆಟ್ರೋಲ್ ಬಂಕ್​ ತುಂಬಾ ಹಾನಿಯಾಗಿದೆ. ಪೆಟ್ರೋಲ್ ಬಂಕ್​ನ ಪಕ್ಕದಲ್ಲಿರುವ ಎಚ್​ಡಿಎಫ್​ಸಿ ಬ್ಯಾಂಕ್‌ನ ಶಾಖೆ ಇದೆ. ಸ್ಫೋಟದ ಜೋರಾದ ಶಬ್ದ ಕೇಳಿದ್ದರಿಂದ ಬ್ಯಾಂಕ್ ನೌಕರರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ:ಕಾಳಿ ಮಾತೆಗೆ ಅಪಮಾನ: ಭಾರತದ ಕ್ಷಮೆ ಕೋರಿದ ಉಕ್ರೇನ್

ಸ್ಫೋಟದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೂಲಂಕಶವಾಗಿ ತನಿಖೆ ನಡೆಸುತ್ತಿದ್ದಾರೆ. ''ನಾವು ಕೆಲಸದಲ್ಲಿ ನಿರತರಾಗಿದ್ದೆವು. ಒಂದು ಕ್ಷಣ ನಮ್ಮ ಕಟ್ಟಡವೇ ನಡುಗಿದೆ. ನಾವು ಏನೋ ಸ್ಫೋಟಗೊಂಡಿರುವ ಶಬ್ದ ಕೇಳಿದ್ದೇವೆ. ಬ್ಯಾಂಕ್​ ಸಿಬ್ಬಂದಿ ಎಲ್ಲರೂ ಭಯದಿಂದ ತಕ್ಷಣವೇ ಕಟ್ಟಡದಿಂದ ಹೊರಗೆ ಬಂದಿದ್ದೇವೆ'' ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಗಳು ತಿಳಿಸಿದರು.

ಇದನ್ನೂ ಓದಿ:ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಸಿಂಹಪಾಲು: ಐಎಂಎಫ್ ವರದಿ

ಸಂಪೂರ್ಣ ಸ್ಥಳ ಪರಿಶೀಲನೆ ನಡೆಸಲು ಒತ್ತಾಯ: ಉದ್ಯೋಗಿಗಳ ಪ್ರಕಾರ, ''ಈ ಬ್ಯಾಂಕ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕೆಲಸ ಮಾಡುತ್ತಾರೆ. ಸ್ಫೋಟದ ಸದ್ದು ಕೇಳಿ ದಿಕ್ಕಾಪಾಲಾಗಿ ಓಡಿ ಬ್ಯಾಂಕಿನ ಕಟ್ಟಡದಿಂದ ಹೊರಗೆ ಬಂದಿದ್ದಾರೆ. ಮೊದಲು ಸಂಬಂಧಪಟ್ಟ ಅಧಿಕಾರಿಗಳ ತಂಡ ಬಂದು ಸಂಪೂರ್ಣ ಸ್ಥಳ ಪರಿಶೀಲನೆ ನಡೆಸಬೇಕು. ನಂತರವೇ ಬ್ಯಾಂಕಿನೊಳಗೆ ಹೋಗುತ್ತೇವೆ'' ಎಂದು ಬ್ಯಾಂಕ್‌ ನೌಕರರು ಪಟ್ಟು ಹಿಡಿದರು.

ಇದನ್ನೂ ಓದಿ:ರಾಜಸ್ಥಾನದಲ್ಲಿ ಇಬ್ಬರು ಪಾಕಿಸ್ತಾನಿ ಒಳನುಸುಳುಕೋರರ ಹೊಡೆದುರುಳಿಸಿದ ಬಿಎಸ್‌ಎಫ್

ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟಗೊಂಡಿರುವ ಶಂಕೆ- ಪೊಲೀಸ್ ಮಾಹಿತಿ: "ಪ್ರಾಥಮಿಕ ತನಿಖೆ ಪ್ರಕಾರ, ಸೋರಿಕೆಯಾದ ಇಂಡಿಯನ್ ಆಯಿಲ್ ಟ್ಯಾಂಕರ್ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಸೂಚಿಸುತ್ತವೆ. ಉಗ್ರಗಾಮಿ ಭಾಗವಹಿಸುವಿಕೆಯ ಯಾವುದೇ ಸೂಚನೆಯಿಲ್ಲ'' ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರಿಂದ ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಇನ್ನೆರಡು ದಿನ ಭಾರೀ ಮಳೆ ಹಿಮಪಾತ ಸಾಧ್ಯತೆ: ಕೇದಾರನಾಥ ಧಾಮ್​​ಕ್ಕೆ ತೆರಳದಂತೆ ಯಾತ್ರಾರ್ಥಿಗಳಿಗೆ ಸರ್ಕಾರದ ಸೂಚನೆ

ಇದನ್ನೂ ಓದಿ:ಗಲ್ಲು ಬದಲಿಗೆ ಪರ್ಯಾಯ ಶಿಕ್ಷೆ ಪರಿಶೀಲಿಸಲು ಸಮಿತಿ ರಚನೆ: ಸುಪ್ರೀಂಗೆ ಕೇಂದ್ರ ಸರ್ಕಾರ

ABOUT THE AUTHOR

...view details