ನವದೆಹಲಿ: ಕೋವಿಡ್ನಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಗಳ ಮೇಲಿನ ನಿಷೇಧವನ್ನು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಆದರೆ ಆಯ್ದ ಮಾರ್ಗಗಳಲ್ಲಿ ಅಧಿಕಾರಿಗಳ ಅನುಮತಿಯೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಅನುಮತಿಸಲಾಗುವುದು ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಆಗಸ್ಟ್ 31ರವರೆಗೆ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಗಳು ಇರಲ್ಲ - ಡಿಜಿಸಿಎ
ಕೋವಿಡ್ನಿಂದಾಗಿ ವಿದೇಶಗಳಿಗೆ ಪ್ರಯಾಣಿಕ ವಿಮಾನಗಳ ಹಾರಾಟ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಆಗಸ್ಟ್ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೋವಿಡ್ ಹೆಚ್ಚಳದ ಭೀತಿ; ವಿದೇಶಗಳಿಗೆ ಪ್ರಮಾಣಿಕ ವಿಮಾನ ಸೇವೆ ನಿಷೇಧ ಆಗಸ್ಟ್ 31ರ ವರೆಗೆ ವಿಸ್ತರಣೆ
ಕೊರೊನಾ ವೈರಸ್ ಹರಡುತ್ತಿರುವ ಕಾರಣ ಕಳೆದ ವರ್ಷ ಮಾರ್ಚ್ 23 ರಿಂದ ಡಿಜಿಸಿಎ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿತ್ತು. ವಂದೇ ಭಾರತ್ ಮಿಷನ್ ಅಡಿ ಆಯ್ದ ದೇಶಗಳಿಗೆ ಮಾತ್ರ ವಿಮಾನ ಸೇವೆ ನೀಡಲಾಗುತ್ತಿದೆ.