ದಿಮಾ ಹಸಾವೋ(ಅಸ್ಸೋಂ):ಡಿಎನ್ಎಲ್ಎ (ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ) ಉಗ್ರರು ಅಸ್ಸೋಂ ದಿಮಾ ಹಸಾವೋ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದಿಮಾ ಹಸಾವೋ ಜಿಲ್ಲೆಯಲ್ಲಿ ಶಂಕಿತ ಡಿಎನ್ಎಲ್ಎ ಉಗ್ರರು ಕಲ್ಲಿದ್ದಲು ತುಂಬಿದ ಐದು ಟ್ರಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಗುರುವಾರ ರಾತ್ರಿ 9 ಗಂಟೆಗೆ ಘಟನೆ ಸಂಭವಿಸಿದ್ದು, ಹಾಫ್ಲಾಂಗ್‌ನಿಂದ 120 ಕಿಮೀ ದೂರದಲ್ಲಿರುವ ರೇಂಜರ್‌ಬಿಲ್ ಪ್ರದೇಶದಲ್ಲಿ ಟ್ರಕ್ಗಳಿಗೆ ಬೆಂಕಿ ಹಚ್ಚಿದ್ದಾರೆ.