ಪಶ್ಚಿಮ ಬಂಗಾಳ:ಎಕ್ಯೂಐಎಸ್ (AQIS) ಹೆಸರಿನ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯನನ್ನು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. 20 ವರ್ಷದ ಯುವಕ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವುದರ ಜೊತೆಗೆ, ಉಗ್ರ ಸಂಘಟನೆಗೆ ನೇಮಕಾತಿಯಲ್ಲೂ ಸಹಾಯ ಮಾಡುತ್ತಿದ್ದ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಕೋಲ್ಕತ್ತಾ ಪೊಲೀಸರ ವಿಶೇಷ ತಂಡ ಮಥುರಾಪುರದ ಅಡಗುತಾಣದಿಂದ ಆರೋಪಿಯನ್ನು ಬಂಧಿಸಿತ್ತು.
ಪ.ಬಂಗಾಳ: ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯನ ಬಂಧನ
ಎಕ್ಯೂಐಎಸ್ ಎಂಬ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯನನ್ನು ಪಶ್ಚಿಮ ಬಂಗಾಳದ ಮಥುರಾಪುರದ ಅಡಗುತಾಣದಿಂದ ಬಂಧಿಸಲಾಗಿದೆ.
ಎಕ್ಯೂಐಎಸ್ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯನ ಬಂಧನ
"ಈ ಹಿಂದೆ ಬಂಧಿಸಲ್ಪಟ್ಟವರ ವಿಚಾರಣೆಯ ನಂತರ ಈತನ ಅಡಗುತಾಣದ ಬಗ್ಗೆ ನಮಗೆ ತಿಳಿಯಿತು. ಶನಿವಾರ ರಾತ್ರಿ ಮಥುರಾಪುರದಲ್ಲಿ ಶೋಧ ನಜೆಸಿ ಬಂಧಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಶಂಕಿತ ಉಗ್ರನನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ನವೆಂಬರ್ 14 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನೂ ಓದಿ:ಕೆಂಪುಕೋಟೆ ದಾಳಿ: ಉಗ್ರ ಆರಿಫ್ ಗಲ್ಲು ಶಿಕ್ಷೆ ಮರುಪರಿಶೀಲನಾ ಅರ್ಜಿ ವಜಾ