ನವದೆಹಲಿ:ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುಶೀಲ್ ಚಂದ್ರ ಆಯ್ಕೆಯಾಗಿದ್ದು, ನಾಳೆಯಿಂದಲೇ ತಮ್ಮ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಜಾವಡೇಕರ್ ಮಾಹಿತಿ ನೀಡಿದ್ದು, ಚುನಾವಣಾ ಆಯುಕ್ತರಾಗಿರುವ ಸುನಿಲ್ ಅರೋರಾ ಅವರ ಅಧಿಕಾರಾವಧಿ ಇಂದು ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಸಹೋದರಿಯರ ಮೇಲೆ ಸೋದರ ಮಾವನಿಂದ ಮಾರಣಾಂತಿಕ ಹಲ್ಲೆ
ಸುಶೀಲ್ ಚಂದ್ರ ಚುನಾವಣಾ ಆಯುಕ್ತರಾಗಿ ಫೆ. 14, 2019ರಂದು ನೇಮಕಗೊಂಡಿದ್ದರು. ಮುಖ್ಯ ಚುನಾವಣಾಧಿಕಾರಿಯಾಗಿ ಇವರ ಅಧಿಕಾರವಧಿ ಮೆ. 14, 2022ರವರೆಗೆ ಇರಲಿದೆ. ಸುಶೀಲ್ ಚಂದ್ರ ಅಧಿಕಾರವಧಿ ವೇಳೆ ಗೋವಾ, ಮಣಿಪುರ್, ಉತ್ತರಾಖಂಡ್, ಪಂಜಾಬ್ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿವೆ. ಇಲ್ಲಿ ಅಧಿಕಾರ ನಡೆಸುತ್ತಿರುವ ವಿವಿಧ ಸರ್ಕಾರಗಳ ಅವಧಿ ಮುಂದಿನ ವರ್ಷ ಅಂತ್ಯಗೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಅಧಿಕಾರವಧಿ ಮೇ. 14ರಂದು ಅಂತ್ಯಗೊಳ್ಳಲಿದೆ.