ಕರ್ನಾಟಕ

karnataka

ETV Bharat / bharat

ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಯ 46 ಬಂಡುಕೋರರ ಶರಣಾಗತಿ - ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ

ಅಸ್ಸೋಂನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿದ ಬಂಡುಕೋರರು - ಆಲ್ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿ ಸರ್ಕಾರಕ್ಕೆ ಶರಣು - 46 ಎಎಎನ್​​ಎಲ್​ಎ ಬಂಡುಕೋರರು ಪೊಲೀಸರ ಎದುರು ಶರಣಾಗತಿ

ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಯ 46 ಬಂಡುಕೋರರ ಶರಣಾಗತಿ
Surrender of 46 rebels of Adivasi National Liberation Army

By

Published : Jan 22, 2023, 6:08 PM IST

ತೇಜ್‌ಪುರ (ಅಸ್ಸೋಂ): ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ತಿಂಗಳ ನಂತರ, ಅಸ್ಸೋಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾನುವಾರ 46 ಕ್ಕೂ ಹೆಚ್ಚು ಆಲ್ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿ (AANLA) ನಾಯಕರು ಮತ್ತು ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ 46 ಎಎಎನ್​​ಎಲ್​ಎ ತೀವ್ರಗಾಮಿಗಳು ತಮ್ಮ 16 ಶಸ್ತ್ರಾಸ್ತ್ರಗಳೊಂದಿಗೆ ಇಂದು ಸೋನಿತ್‌ಪುರ ಜಿಲ್ಲೆಯ ಧಕಿಯಾಜುಲಿಯಲ್ಲಿರುವ ಸೋನಿತ್‌ಪುರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ)ಯ ಮುಂದೆ ಶರಣಾಗಿದ್ದಾರೆ.

ಅವರು ಎಂಟು ಪಿಸ್ತೂಲ್‌ಗಳು, ಆರು ರೈಫಲ್‌ಗಳು ಮತ್ತು ಎರಡು ಕಾರ್ಬೈನ್‌ಗಳು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇಂದು ಧೆಕಿಯಾಜುಲಿಯ ಅನ್ಲಾ ಫೀಲ್ಡ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ (ಅಸ್ಸೋಂ ಪೊಲೀಸ್ ವಿಶೇಷ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕರು) ಹಿರೇನ್ ನಾಥ್ ಅವರ ನಿರ್ದೇಶನದ ಮೇರೆಗೆ ಸೋನಿತ್‌ಪುರ ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲಾಯಿತು.

ಅಸ್ಸಾಂನಲ್ಲಿ ವಾಸಿಸುವ ದೊಡ್ಡ ಬುಡಕಟ್ಟು (ಚಹಾ ಕಾರ್ಮಿಕರ) ಸಮುದಾಯದ ಸಹಜ ಸಾಂವಿಧಾನಿಕ ಹಕ್ಕುಗಳು, ಸುರಕ್ಷಿತ ಭವಿಷ್ಯ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದ ಶೋಷಣೆಯ ವಿರುದ್ಧ ಸಾವಿರ ಸಂಖ್ಯೆಯಲ್ಲಿ ದಂಗೆಗಳನ್ನು ಪ್ರಾರಂಭಿಸುವಂತೆ AANLA ಅನಿವಾರ್ಯತೆಯಲ್ಲಿದೆ ಎಂದು ಅದರ ಅಧ್ಯಕ್ಷ ಡಿ ನಾಯಕ್ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಸಂಘಟನೆಗಳ ಹೋರಾಟದಲ್ಲಿ ಹಲವಾರು ಹಿನ್ನಡೆಗಳ ನಂತರ ಅವರು ಸರ್ಕಾರದೊಂದಿಗೆ ಸಂವಾದಕ್ಕೆ ಮುಂದಾದರು. ಜನವರಿ 24, 2012 ರಂದು ಶಾಂತಿ ಮಾತುಕತೆ ಆರಂಭವಾಗಿದ್ದವು.

ಶಿಕ್ಷೆಯ ವಿಚಾರದಲ್ಲಿ ಹಲವಾರು ಸುತ್ತಿನ ಮಾತುಕತೆಗಳ ನಂತರ, ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಪ್ರಸ್ತುತ ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತು ಕೇಂದ್ರ ಸರ್ಕಾರವು 15 ಸೆಪ್ಟೆಂಬರ್ 2022 ರಂದು ಗೃಹ ಸಚಿವಾಲಯದಲ್ಲಿ ಬುಡಕಟ್ಟು ಜನಾಂಗದ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ತ್ರಿಪಕ್ಷೀಯ ಬುಡಕಟ್ಟು ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು. AANLA ಅಸ್ಸೋಂ ಮೂಲದ ಎಂಟು ಬುಡಕಟ್ಟು ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾಗಿದೆ.

ಈ ಮಾತುಕತೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಅಸ್ಸಾಂನ ಬುಡಕಟ್ಟು (ಚಹಾ ಕಾರ್ಮಿಕರ) ಸಮುದಾಯದ ಹಕ್ಕುಗಳನ್ನು ರಕ್ಷಿಸಲಾಗಿದೆ ಮತ್ತು ಖಾತ್ರಿಪಡಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಡಿ ನಾಯಕ್ ಹೇಳಿದರು. ಪ್ರಸ್ತುತ ಆಡಳಿತಾರೂಢ ಸರ್ಕಾರವು ಅಸ್ಸೋಂನ ಬುಡಕಟ್ಟು ಜನರ ಅಭಿವೃದ್ಧಿ ಮತ್ತು ಹಕ್ಕುಗಳಿಗಾಗಿ ತೀರ್ಮಾನಿಸಲಾದ ಆದಿಬಾಸಿ ಶಾಂತಿ ಒಪ್ಪಂದದಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ ಸಂಘಟನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಎರಡು ಬ್ರೂ-ರಿಯಾಂಗ್ ಬಂಡುಕೋರ ಗುಂಪುಗಳಿಗೆ ಸೇರಿದ 1179 ಉಗ್ರಗಾಮಿಗಳು, ಬ್ರೂ ಲಿಬರೇಶನ್ ಆರ್ಮಿ ಯೂನಿಯನ್ (BLAU) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಲಿಬರೇಶನ್ ಆರ್ಮಿ (UDLA) ಡಿಸೆಂಬರ್ 12 ರಂದು ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ದಕ್ಷಿಣ ಅಸ್ಸೋಂನ ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳು ಎರಡು ಬ್ರೂ-ರಿಯಾಂಗ್ ದಂಗೆಕೋರ ಗುಂಪುಗಳ ಕಾರ್ಯಾಚರಣೆಯ ಕೇಂದ್ರಸ್ಥಾನವಾಗಿದ್ದವು.

ಇದನ್ನೂ ಓದಿ: ಆಂಧ್ರಪ್ರದೇಶ: ಪೊಲೀಸರ ಮುಂದೆ ಶರಣಾದ ಮಾವೋವಾದಿ ನಾಯಕಿ

ABOUT THE AUTHOR

...view details