ಕರ್ನಾಟಕ

karnataka

ETV Bharat / bharat

ಐಎಮ್‌ಡಿಬಿಯಲ್ಲಿ ಮೂರನೇ ಅತಿ ಹೆಚ್ಚು ರೇಟ್ ಪಡೆದ 'ಸೂರರೈ ಪೊಟ್ರು'

ಈ ಚಿತ್ರವನ್ನು ಅನೇಕ ವಿಭಾಗಗಳ ಅಡಿ ಆಸ್ಕರ್ 2021 ಕ್ಕೆ ಆಯ್ಕೆ ಮಾಡಲಾಗಿದೆ. ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರಕ್ಕೆ ಅರ್ಹರಾದ 366 ಚಿತ್ರಗಳಲ್ಲಿ ಇದು ಪ್ರಮುಖ ಏಕೈಕ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ.

suriyas-soorarai-pottru-becomes-third-highest-rated-movie-on-imdb
suriyas-soorarai-pottru-becomes-third-highest-rated-movie-on-imdb

By

Published : May 17, 2021, 4:31 PM IST

ಹೈದರಾಬಾದ್: ತಮಿಳು ಸೂಪರ್‌ಸ್ಟಾರ್ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಐಎಮ್‌ಡಿಬಿಯ ಟಾಪ್ ಮೂರು ಚಲನಚಿತ್ರಗಳಲ್ಲಿ ಒಂದಾಗಿದೆ.

ತಮಿಳು ಭಾಷೆಯ ಈ ಚಲನಚಿತ್ರವು ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ಅನ್ನು ಸ್ಥಾಪಿಸಿದ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಅವರ ಜೀವನದ ಕಾಲ್ಪನಿಕ ಕಥೆಯಾಗಿದೆ. ದಿ ಶಾವ್ಶಾಂಕ್ ರಿಡೆಂಪ್ಶನ್ (1994) ಮತ್ತು ದಿ ಗಾಡ್ಫಾದರ್ (1972) ನಂತರ ಸೂರರೈ ಪೊಟ್ರು 9.1 ರೇಟಿಂಗ್​ನೊಂದಿಗೆ 3 ನೇ ಸ್ಥಾನವನ್ನು ಗಳಿಸಿದೆ.

ಈ ಚಿತ್ರವನ್ನು ಅನೇಕ ವಿಭಾಗಗಳ ಅಡಿಯಲ್ಲಿ ಆಸ್ಕರ್ 2021 ಕ್ಕೆ ಆಯ್ಕೆ ಮಾಡಲಾಗಿದೆ. ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರಕ್ಕೆ ಅರ್ಹರಾದ 366 ಚಿತ್ರಗಳಲ್ಲಿ ಇದು ಪ್ರಮುಖ ಏಕೈಕ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ದುರದೃಷ್ಟವಶಾತ್ ಮಾರ್ಚ್ 15 ರಂದು ಅಧಿಕೃತವಾಗಿ ಆಸ್ಕರ್ ಓಟದಿಂದ ಹೊರಗುಳಿದಿದೆ ಎಂದು ಘೋಷಿಸಲಾಯಿತು.

78 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಹತ್ತು ಭಾರತೀಯ ಚಿತ್ರಗಳಲ್ಲಿ ಸೂರರೈ ಪೊಟ್ರು ಕೂಡ ಆಯ್ಕೆಯಾಗಿದೆ. ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಮೋಹನ್ ಬಾಬು, ಪರೇಶ್ ರಾವಲ್ ಮತ್ತು ಅಪರ್ಣಾ ಬಾಲಮುರಳಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details