ಖಗಾರಿಯಾ (ಬಿಹಾರ):ಇಲ್ಲಿನ ಅಳೋಲಿ ಆರೋಗ್ಯ ಕೇಂದ್ರದಲ್ಲಿ ಅನಸ್ತೇಷಿಯಾ ನೀಡದೇ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಸರ್ಕಾರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಪತ್ರ ಬರೆದಿದೆ. ಅಲ್ಲದೇ ಆಸ್ಪತ್ರೆಯ ವೈದ್ಯರು ಮತ್ತು ಎನ್‌ಜಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಮಹಿಳೆಯರಿಗೆ ಅನಸ್ತೇಷಿಯಾ ರಹಿತ ಶಸ್ತ್ರಚಿಕಿತ್ಸೆ; ವರದಿ ಕೇಳಿದ ಮಹಿಳಾ ಆಯೋಗ
ಖಗಾರಿಯಾದ ಅಳೋಲಿ ಆರೋಗ್ಯ ಕೇಂದ್ರದಲ್ಲಿ ಅನಸ್ತೇಷಿಯಾ ನೀಡದೆ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಎನ್‌ಜಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿದೆ.
ಘಟನೆ ಹಿನ್ನೆಲೆ: ಅಳೋಲಿ ಆರೋಗ್ಯ ಕೇಂದ್ರದಲ್ಲಿ 30 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಉದ್ದೇಶವಿತ್ತು. ಇದರಲ್ಲಿ 23 ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಅರಿವಳಿಕೆ ಮದ್ದು (ಅನಸ್ತೇಷಿಯಾ) ನೀಡದೇ 23 ಮಹಿಳೆಯರಿಗೆ ಆಪರೇಷನ್ ಮಾಡಲಾಗಿದೆ. ಇದರಿಂದ ನೋವುಂಡ ಮಹಿಳೆಯರು ಆಪರೇಷನ್ ವೇಳೆ ಗೋಳಾಡಲು ಪ್ರಾರಂಭಿಸಿದ್ದಾರೆ. ನೋವಿನಿಂದ ಅಳುತ್ತಿದ್ದರೂ ಕೂಡ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರು.
ಇದನ್ನೂ ಓದಿ:ಅನಸ್ತೇಷಿಯಾ ನೀಡದೇ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ: ವೈದ್ಯರ ಕ್ರೂರ ವರ್ತನೆ