ಕರ್ನಾಟಕ

karnataka

ETV Bharat / bharat

ಕೋವಿಡ್​ ಪ್ರಕರಣಗಳು ಉಲ್ಬಣ: ಕಳೆದ 24 ಗಂಟೆಗಳಲ್ಲಿ 6,050 ಹೊಸ ಪ್ರಕರಣಗಳು ದಾಖಲು! - ದಾಖಲೆಯಾದ ಅತ್ಯಧಿಕ ಪ್ರಕರಣ

ದೇಶದಲ್ಲಿ ಕೋವಿಡ್​ ಪ್ರಕರಣಗಳು ಏರಿಕೆ ಕಂಡ ಹಿನ್ನೆಲೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ಕರೆದಿದೆ.

Surge in Covid cases: Record cases rise in last 24 hours
Surge in Covid cases: Record cases rise in last 24 hours

By

Published : Apr 7, 2023, 11:51 AM IST

ಬೆಂಗಳೂರು: ದೇಶದಲ್ಲಿ ಕೋವಿಡ್​ ಸೋಂಕು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೆ ಇದೆ. ಕಳೆದ 24 ಗಂಟೆಗಳಲ್ಲಿ 6,050 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಕಳೆದ ನಾಲ್ಕು ತಿಂಗಳಲ್ಲೇ ದಾಖಲೆಯಾದ ಅತ್ಯಧಿಕ ಪ್ರಕರಣಗಳು ಇವಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು 28,303 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ದೈನಂದಿನ ಪ್ರಕರಣದಲ್ಲಿ ಏರಿಕೆ: ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.06ಕ್ಕೆ ಏರಿಕೆ ಆಗಿದೆ. ಆದರೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು 98.75 ಪ್ರತಿಶತದಷ್ಟು ದಾಖಲಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,85,858 ಕ್ಕೆ ಏರಿದರೆ, ಕೋವಿಡ್​ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಮಾಹಿತಿ ನೀಡಿದೆ.

ಈ ಮಧ್ಯೆ ದೈನಂದಿನ ಕೋವಿಡ್​ ಪ್ರಕರಣಗಳ ದಾಖಲಾತಿ ಶೇ 3.39ರಷ್ಟಿದ್ದು, ವಾರದ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 3.02ರಷ್ಟಿದೆ. ಸಾವಿನ ಒಟ್ಟಾರೆ ಸಂಖ್ಯೆ 5,30,943ರಷ್ಟಾಗಿದೆ. ಮಹಾರಾಷ್ಟ್ರದಲ್ಲಿ ಮೂರು, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ ಎರಡು, ದೆಹಲಿಯಲ್ಲಿ ಒಂದು, ಗುಜರಾತ್​​,ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಮತ್ತು ಕೇರಳದಲ್ಲಿ ಒಂದು ಸೇರಿದಂತೆ 14 ಸಾವುಗಳು ವರದಿಯಾಗಿವೆ.

ಹೊಸ ಪ್ರಕರಣಗಳು ಪತ್ತೆ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 6,050 ಹೊಸ ಪ್ರಕರಣಗಳು ದಾಖಲಾಗಿದ್ದು, 203 ದಿನದಲ್ಲಿಯೇ ಇದು ಗರಿಷ್ಠ ಮಟ್ಟದ ಏರಿಕೆ ಆಗಿದೆ. ಸದ್ಯ ದೇಶದಲ್ಲಿ 28,303 ಪ್ರಕರಣಗಳು ಸಕ್ರಿಯವಾಗಿವೆ. ದೇಶದಲ್ಲಿ ಇದುವರೆಗೆ 220.66 ಕೋಟಿ ಒಟ್ಟು ಡೋಸ್‌ಗಳನ್ನು ನೀಡಲಾಗಿದೆ. 95.21 ಕೋಟಿ ಎರಡನೇ ಡೋಸ್ ಮತ್ತು 22.87 ಕೋಟಿ ಮುನ್ನೆಚ್ಚರಿಕೆ ಡೋಸ್ ಕೂಡಾ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಉನ್ನತ ಮಟ್ಟದ ಸಭೆ: ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇನ್ನು ಕೋವಿಡ್​ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕುರಿತು ಪ್ರಧಾನಿ ಮೋದಿ ಎಲ್ಲ ರಾಜ್ಯಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಇಂದು ಆರೋಗ್ಯ ಸಚಿವ ಮಾಂಡವೀಯ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ: ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಎದುರಿಸುವ ಸಿದ್ದತೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್​, ಆಮ್ಲಜನಕ ಪೂರೈಕೆ ಸೇರಿದಂತೆ ಇನ್ನಿತರ ಆರೋಗ್ಯ ಕ್ರಮಗಳ ಕುರಿತು ಅವರು ಉನ್ನತ ಮಟ್ಟದ ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳಲಿದ್ದು, ಅಗತ್ಯ ಸೂಚನೆಗಳನ್ನು ನೀಡುವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೋವಿಡ್​ ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮಾಸ್ಕ್​​ ಧರಿಸುವಂತೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇನ್​ಫ್ಲುಯೆಂಜಾ ಸೇರಿದಂತೆ ಎಕ್ಸ್​ಬಿಬಿ.1.16 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದು ಸಹ ವರದಿಯಾಗಿದೆ.

ಇದನ್ನೂ ಓದಿ: ವಾಯುಮಾಲಿನ್ಯಕ್ಕೆ ತುತ್ತಾದವರ ಮೇಲೆ ಕೋವಿಡ್​ ಲಸಿಕೆ ಹೆಚ್ಚು ಪರಿಣಾಮ ಬೀರದು: ಅಧ್ಯಯನ

ABOUT THE AUTHOR

...view details