ನವದೆಹಲಿ: ಶಿಲೀಂಧ್ರಗಳ ಸೋಂಕಿನ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಬೆಲೆ ಕಡಿಮೆ ಮಾಡಿಸುವಂತೆ ಒತ್ತಾಯಿಸಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡರಿಗೆ ಸಚಿವ ಸುರೇಶ್ ಪ್ರಭು ಪತ್ರ ಬರೆದಿದ್ದಾರೆ.
ಸೋಂಕಿನ ಚಿಕಿತ್ಸೆಗೆ ಬಳಸುವ ಆಂಫೊಟರ್ಸಿನ್ ಬೆಲೆಯನ್ನು ಔಷಧೀಯ ಕಂಪನಿಗಳು ಹೆಚ್ಚಳ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ನೀವು ಹಸ್ತಕ್ಷೇಪ ಮಾಡಬೇಕೆಂದು ವಿನಂತಿಸಿದ್ದಾರೆ.
ಕೋವಿಡ್ ರೋಗಿಗಳು ಹಾಗೂ ಮಧುಮೇಹವಿರುವವರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಇತ್ತೀಚೆಗಷ್ಟೇ ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ಹೇಳಿದ್ದಾರೆ.