ಕರ್ನಾಟಕ

karnataka

ETV Bharat / bharat

ಈ ಸ್ವೀಟ್​ ಕೆಜಿಗೆ Just 9,000 ರೂ.; ಅಂತಹದ್ದೇನಿದೆ ವಿದೇಶದಲ್ಲೂ ಫೇಮಸ್ ಆದ ಸಿಹಿಯಲ್ಲಿ​!? - ಚಾಂದನಿ ಪಡ್ವಾ

ಗುಜರಾತ್​ನ ಸೂರತ್​ನಲ್ಲಿ ತಯಾರು ಆಗಿರುವ ವಿಶೇಷ ಸ್ವೀಟ್ ಬೆಲೆ ಬರೋಬ್ಬರಿ 9 ಸಾವಿರ ರೂ. ಅಂದರೆ ನೀವೂ ನಂಬಲೇಬೇಕು. ಇಷ್ಟಕ್ಕೂ ಅದರಲ್ಲಿ ಅಂತಹದ್ದೇನಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ...

sweet Ghari
sweet Ghari

By

Published : Oct 20, 2021, 8:11 PM IST

Updated : Oct 20, 2021, 8:24 PM IST

ಸೂರತ್​(ಗುಜರಾತ್​):ಬೇಕರಿ ಹಾಗೂ ಸ್ವೀಟ್​ ಅಂಗಡಿಗಳಲ್ಲಿ ಲಭ್ಯವಾಗುವ ಸಿಹಿ ಪದಾರ್ಥಗಳು ಪ್ರತಿ ಕೆಜಿಗೆ ಅಬ್ಬಬ್ಬಾ ಅಂದರೆ 500ರಿಂದ 1000 ರೂಪಾಯಿವರೆಗೆ ಇರುತ್ತದೆ. ಆದರೆ ಗುಜರಾತ್​ನ ಸೂರತ್​ನಲ್ಲಿ ಸಿಗುವ ಈ ಸ್ವೀಟ್​​ ಬೆಲೆ ಕೇಳಿದ್ರೆ ತಲೆ ತಿರುಗುವುದು ಗ್ಯಾರಂಟಿ. ಇಷ್ಟಕ್ಕೂ ಅದರಲ್ಲಿ ಏನಿದೆ ಎಂಬ ಪ್ರಶ್ನೆ ಸಹ ಉದ್ಭವವಾಗುತ್ತದೆ.

ಗುಜರಾತ್​ನ ಸೂರತ್​​ನಲ್ಲಿ ನಾಳೆ ಚಾಂದನಿ ಪಡ್ವಾ ಆಚರಣೆ ಮಾಡಲಾಗ್ತಿದ್ದು, ಹೀಗಾಗಿ ಹೆಚ್ಚಿನ ಸ್ವೀಟ್​​ ತಯಾರು ಮಾಡಲಾಗುತ್ತದೆ. ಪ್ರತಿ ವರ್ಷ ಶರದ್​ ಪೂರ್ಣಿಮೆಯ ಮಾರನೇ ದಿನ ಈ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಹಬ್ಬದಲ್ಲಿ ವಿವಿಧ ಸಿಹಿ ತಿಂಡಿ ತಯಾರು ಮಾಡಲಾಗ್ತದೆ.

ಈ ಸ್ವೀಟ್​ ಕೆಜಿಗೆ 9,000 ರೂಪಾಯಿ ಮಾತ್ರ

ಚಾಂದನಿ ಪಡ್ವಾ ಹಬ್ಬದ ಪ್ರಯುಕ್ತ ಸೂರತ್​ನ ಸ್ವೀಟ್​ ಅಂಗಡಿವೊಂದರಲ್ಲಿ 'ಗೋಲ್ಡ್​​ ಘರಿ' ಎಂಬ ವಿಶೇಷ ಸಿಹಿ ತಿನಿಸು ತಯಾರು ಆಗಿದ್ದು, ಇದರ ಬೆಲೆ ಪ್ರತಿ ಕೆಜಿಗೆ 9 ಸಾವಿರ ರೂಪಾಯಿ. ಬರೋಬ್ಬರಿ 140 ಟನ್​​ಗಳಷ್ಟು ಶುದ್ಧ ತುಪ್ಪದಿಂದ ಈ ಸಿಹಿ ತಿನಿಸು ಸಜ್ಜುಗೊಂಡಿದ್ದು, 10 ಸಾವಿರ ಕಿಲೋದಷ್ಟು ಸಿಹಿ ಗಲ್ಫ್ ರಾಷ್ಟ್ರಗಳು, ಅಮೆರಿಕ ಮತ್ತು ಯುರೋಪ್​ಗಳಿಗೆ ರಫ್ತು ಮಾಡಲಾಗುತ್ತದೆ.

ಸೂರತ್​ನ ಸ್ವೀಟ್​ ಘರಿ

ಮಾಮೂಲಿಯಾಗಿ ಈ ಘರಿ ಸಿಹಿ ತಿನಿಸು ಪ್ರತಿ ಕೆಜಿಗೆ 600 ದಿಂದ ಸಾವಿರ ರೂಪಾಯಿಯೊಳಗೆ ಇರುತ್ತದೆ. ಆದರೆ, ಸೂರತ್​ನ ಸ್ವೀಟ್ ಅಂಗಡಿಯಲ್ಲಿ ತಯಾರುಗೊಂಡಿರುವ ಘರಿ ಮಾತ್ರ 9 ಸಾವಿರ ರೂಪಾಯಿಗೆ ಕೆಜಿ ಮಾರಾಟವಾಗುತ್ತದೆ.

ವಿಶೇಷ ಏನು?

ಈ ಸ್ವೀಟ್​ಗೆ ಸಂಪೂರ್ಣವಾಗಿ 24 ಕ್ಯಾರೆಟ್​ ಚಿನ್ನದ ಲೇಪನವಿರುವ ಕಾರಣ ಇಷ್ಟೊಂದು ದುಬಾರಿಯಾಗಿ ಮಾರಾಟ ಮಾಡಲಾಗ್ತಿದೆಯಂತೆ. ವಿಭಿನ್ನ ಡ್ರೈ ಫ್ರೂಟ್ಸ್​​ಗಳಿಂದ ಈ ಸಿಹಿ ತಿನಿಸು ಸಜ್ಜಾಗಿದ್ದು, ಖರೀದಿ ಮಾಡಲು ಜನರು ಸಾಲು ಸಾಲಾಗಿ ನಿಂತುಕೊಂಡಿರುತ್ತಾರೆ.

Last Updated : Oct 20, 2021, 8:24 PM IST

ABOUT THE AUTHOR

...view details