ಸೂರತ್(ಗುಜರಾತ್): ಶಾಲೆಯಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಮಕ್ಕಳು ತಪ್ಪು ಮಾಡಿದರೆ, ಅವರ ತಪ್ಪನ್ನು ಶಿಕ್ಷಕರು ತಿದ್ದುತ್ತಾರೆ. ಒಂದು ವೇಳೆ ಹೋಮ್ ವರ್ಕ್ನಲ್ಲಿ ತಪ್ಪು ಮಾಡಿದರೆ, ಅದನ್ನು ಕೂಡಾ ಸರಿಪಡಿಸಿ ಕಳಿಸಲಾಗುತ್ತದೆ. ಒಮ್ಮೊಮ್ಮೆ 'ಶಿಕ್ಷೆ'ಯನ್ನೂ ನೀಡಲಾಗುತ್ತದೆ. ಆದರೆ ಗುಜರಾತ್ನ ಸೂರತ್ನಲ್ಲಿ ಇರುವ ಶಾಲೆಯೊಂದಲ್ಲಿ ಮಕ್ಕಳು ತಪ್ಪು ಮಾಡಿದರೆ, ಅವರಿಗೆ ಬೇವಿನ ರಸ ನೀಡುತ್ತಂತೆ. ಹೌದು, ಹೋಮ್ ವರ್ಕ್ ಮಾಡದ ಅಥವಾ ಇನ್ಯಾವುದೇ ತಪ್ಪುಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ಬೇವಿನ ರಸವನ್ನು ನೀಡಲಾಗುತ್ತದೆ.
ಸೂರತ್ನ ಅಡಾಜನ್ ಪ್ರದೇಶದ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸದೆ ಶಾಲೆಗೆ ಬಂದರೆ ಅಥವಾ ತಮ್ಮ ಮನೆಕೆಲಸವನ್ನು ಮುಗಿಸದೆ ಶಾಲೆಗೆ ಬಂದರೆ ಅವರಿಗೆ ಬೇವಿನ ರಸ ನೀಡಲಾಗುತ್ತದೆ. ಇದಷ್ಟು ಮಾತ್ರವಲ್ಲದೇ ಅಲ್ಲಿನ ಪ್ರಾಂಶುಪಾಲರಾದ ಮಹೇಶ್ ಪಾಟೀಲ್ ಗಾಂಧಿ ತತ್ವಗಳನ್ನು ಅನುಸರಿಸುತ್ತಿರುವ ಕಾರಣದಿಂದ ಮಕ್ಕಳಲ್ಲಿ ಗಾಂಧಿ ತತ್ವವನ್ನು ಬೆಳೆಸಲು ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅವರಿಗೆ ಶಿಕ್ಷೆಯನ್ನೂ ನೀಡಿದಂತಾಗುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ. ಗಾಂಧಿವಾದಿ ತತ್ವಗಳ ಬೋಧಕರಾದ ಮಹೇಶ್ ಪಟೇಲ್ ಅವರು ತಪ್ಪು ಮಾಡಿದ ಮಕ್ಕಳಿಗೆ ಬೇವಿನ ರಸ ಕುಡಿಸುತ್ತಾರೆ.