ಕರ್ನಾಟಕ

karnataka

ETV Bharat / bharat

ಮಗನ 'ನಿತ್ಯ' ನಗುವಿಗೆ ಚಂದ್ರನನ್ನೇ ಉಡುಗೊರೆ ನೀಡಿದ ಅಪ್ಪ - ಗುಜರಾತ್​ ಸುದ್ದಿ

ಸೂರತ್‌ನ ಸಾರ್ಥಾನಾ ಪ್ರದೇಶದ ನಿವಾಸಿ ವಿಜಯ್ ಕ್ಯಾಥೇರಿಯಾ ತನ್ನ ಎರಡು ತಿಂಗಳ ಮಗ ನಿತ್ಯಾಗೆ ಉಡುಗೊರೆ ನೀಡಲು ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ್ದಾರೆ.

surat
ಚಂದ್ರನನ್ನೇ ಉಡುಗೊರೆ ನೀಡಿದ ಅಪ್ಪ

By

Published : Mar 26, 2021, 11:37 AM IST

ಸೂರತ್​:ಇಲ್ಲಿನ ವ್ಯಕ್ತಿಯೊಬ್ಬರು ತನ್ನ ಮಗನ ಮೇಲಿನ ಪ್ರೀತಿಯಿಂದ ಚಂದ್ರನಲ್ಲಿ ಒಂದು ಎಕರೆ ಜಾಗ ಖರೀದಿಸಿ ಉಡುಗೊರೆ ನೀಡಿದ್ದಾರೆ.

ಸೂರತ್‌ನ ಸಾರ್ಥಾನಾ ಪ್ರದೇಶದ ನಿವಾಸಿ ವಿಜಯ್ ಕ್ಯಾಥೇರಿಯಾ ತನ್ನ ಎರಡು ತಿಂಗಳ ಮಗ ನಿತ್ಯಾಗೆ ಉಡುಗೊರೆಯಾಗಿ ನೀಡಲು ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ್ದಾರೆ. ವಿಜಯ್ ಗಾಜಿನ ವ್ಯಾಪಾರಿ. ಮೂಲತಃ ಸೌರಾಷ್ಟ್ರದವರು. ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು, ಅವರು ನ್ಯೂಯಾರ್ಕ್ ಇಂಟರ್​ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ ಕಂಪನಿಗೆ ಇಮೇಲ್ ಕಳುಹಿಸಿದ್ದಾರೆ. ಅರ್ಜಿಯನ್ನು ಕಂಪನಿಯು ಸ್ವೀಕರಿಸಿದೆ.

ವಿಜಯ್ ಕ್ಯಾಥೇರಿಯಾ ಖರೀದಿಸಿದ ಜಾಗ

ಮಗನ ಜನನದ ಸಮಯದಲ್ಲಿ, ವಿಜಯ್ ಕ್ಯಾಥೇರಿಯಾ ತನ್ನ ಮಗನಿಗೆ ಕೆಲವು ವಿಶೇಷ ಉಡುಗೊರೆಯನ್ನು ನೀಡಬೇಕೆಂದು ಯೋಚಿಸಿದ್ದನು. ಹೀಗಾಗಿ ಇತರ ಉಡುಗೊರೆಗಳಿಗಿಂತ ಭಿನ್ನವಾಗಿ ಮತ್ತು ವಿಶೇಷವಾಗಿ ಚಂದ್ರನಲ್ಲಿ ಜಾಗ ಖರೀದಿಸಿ ನೀಡಿದ್ದಾರೆ.

ವಿಜಯ್ ಕ್ಯಾಥೇರಿಯಾ ನ್ಯೂಯಾರ್ಕ್ ಇಂಟರ್​ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ ಎಂಬ ಕಂಪನಿಯನ್ನು ಸಂಪರ್ಕಿಸಿ ಮಾರ್ಚ್ 13 ರಂದು ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರು. ಒಂದು ಎಕರೆ ಜಮೀನು ಖರೀದಿಸಲು ಅರ್ಜಿಯನ್ನು ಕಂಪನಿಯು ಸ್ವೀಕರಿಸಿತು. ಅದರ ನಂತರ, ಕಂಪನಿ ಎಲ್ಲ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿತು ಮತ್ತು ಭೂಮಿಯನ್ನು ಖರೀದಿಸಲು ಅನುಮೋದನೆ ಪಡೆಯಲು ವಿಜಯ್ ಕ್ಯಾಥೇರಿಯಾ ಅವರಿಗೆ ಇಮೇಲ್ ಮಾಡಿದೆ. ಇದರ ನಂತರ, ಕಂಪನಿಯು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಳುಹಿಸಿದೆ.

ABOUT THE AUTHOR

...view details