ನವದೆಹಲಿ: ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ಸಲ್ಲಿಸಿ ಹಿಂಪಡೆಯಲಾದ ಅರ್ಜಿಯನ್ನು ಮರು ಪರಿಗಣಿಸುವಂತೆ ಕೋರಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ರಕ್ಷಣೆ ಕೋರಿ ಮತ್ತೆ ಸುಪ್ರೀಂ ಮೊರೆ ಹೋದ ನೂಪುರ್: ಅದೇ ಪೀಠದಿಂದ ಇಂದು ವಿಚಾರಣೆ - ನೂಪುರ್ ಶರ್ಮಾ ವಿರುದ್ಧ ವಿಚಾರಣೆ
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದಿವಾಲಾ ಅವರ ನೇತೃತ್ವದ ರಜಾಕಾಲದ ಪೀಠವು ಜುಲೈ 1 ರಂದು ತಮ್ಮ ವಿರುದ್ಧ ಮಾಡಿದ ಕಟು ಟಿಪ್ಪಣಿಗಳನ್ನು ಅನೂರ್ಜಿಗೊಳಿಸುವಂತೆ ಕೂಡ ನೂಪುರ್ ಶರ್ಮಾ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದಿವಾಲಾ ಅವರ ನೇತೃತ್ವದ ರಜಾಕಾಲದ ಪೀಠವು ಜುಲೈ 1 ರಂದು ತಮ್ಮ ವಿರುದ್ಧ ಮಾಡಿದ ಟಿಪ್ಪಣಿಗಳನ್ನು ಅನೂರ್ಜಿಗೊಳಿಸುವಂತೆ ಕೂಡ ನೂಪುರ್ ಶರ್ಮಾ ಮನವಿ ಮಾಡಿದ್ದಾರೆ. ಎಲ್ಲ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ರಜಾಕಾಲದ ಪೀಠವು ನೂಪುರ್ ವಿರುದ್ಧ ಟಿಪ್ಪಣಿ ಮಾಡಿತ್ತು. ಸುಪ್ರೀಂಕೋರ್ಟ್ನ ಟೀಕೆಯ ನಂತರ ನೂಪುರ್ ಅವರಿಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ಅವರ ಪರ ವಕೀಲರೊಬ್ಬರು ಹೇಳಿದ್ದಾರೆ.
ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂಗಳಲ್ಲಿ ದಾಖಲಾದ ದೂರುಗಳನ್ನು ಒಟ್ಟುಗೂಡಿಸಲು ಶರ್ಮಾ ಕೋರಿದ್ದಾರೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಪಾರ್ದಿವಾಲಾ ಅವರ ಅದೇ ಪೀಠವು ಶರ್ಮಾ ಅವರ ಹೊಸ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಿದೆ.