ಕರ್ನಾಟಕ

karnataka

By

Published : Apr 8, 2021, 7:08 PM IST

ETV Bharat / bharat

ಆರೋಪಗಳು ಬಲವಾಗಿವೆ: ಮಹಾ ಸರ್ಕಾರ, ದೇಶಮುಖ್​ ಅರ್ಜಿ ವಜಾ ಮಾಡಿದ ಸುಪ್ರೀಂ

ಮಹಾರಾಷ್ಟ್ರದ ಮಾಜಿ ಗೃಹ ಸಚಿವರ ವಿರುದ್ಧದ ಸಿಬಿಐ ತನಿಖೆ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

CBI probe against Anil Deshmukh
ದೇಶಮುಖ್​ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ :ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್​ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಮುಂಬೈ ಹೈಕೋರ್ಟ್​ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ತಿಂಗಳಿಗೆ ನೂರು ಕೋಟಿ ರೂ. ಸಂಗ್ರಹ ಮಾಡುವಂತೆ ಪೊಲೀಸ್ ಅಧಿಕಾರಿಗೆ ಗುರಿ ನೀಡಲಾಗಿತ್ತು ಎಂದು ಮುಂಬೈ ನಗರದ ಮಾಜಿ ಪೊಲೀಸ್​ ಆಯುಕ್ತ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮುಂಬೈ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಕೂಡಾ ಆಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್​​ ಸಿಬಿಐ ತನಿಖೆಗೆ ವಹಿಸಿ ಆದೇಶ ನೀಡಿತ್ತು.

ಓದಿ : ಕೆಂಪುಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ವಿಚಾರಣೆ ಮುಂದೂಡಿದ ಕೋರ್ಟ್​

ಮುಂಬೈ ಹೈಕೋರ್ಟ್​ನ ಈ ಆದೇಶ ವಜಾ ಮಾಡಬೇಕೆಂದು ಕೋರಿ​ ಮಹಾರಾಷ್ಟ್ರ ಸರ್ಕಾರ ಮತ್ತು ಅನಿಲ್​ ದೇಶಮುಖ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಜಸ್ಟೀಸ್​ ಕೃಷ್ಣಾ ಕೌಲ್ ಮತ್ತು ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ, ಮಹಾ ಸರ್ಕಾರದ ಅರ್ಜಿಯನ್ನ ವಜಾ ಮಾಡಿದೆ. ಆರೋಪದ ಸ್ವರೂಪವನ್ನು ನೋಡಿದರೆ, ಪ್ರಕರಣಕ್ಕೆ ತನಿಖೆಯ ಅವಶ್ಯಕತೆ ಇದೆ ಎಂದು ಅನಿಸುತ್ತಿದೆ. ಹೀಗಾಗಿ ಬಾಂಬೆ ಹೂಕೋರ್ಟ್​ ನೀಡಿದ ತೀರ್ಪಿನಲ್ಲಿ ತಾವು ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಕೋರ್ಟ್​ ಹೇಳಿದೆ.

ಈ ಸಂಬಂಧ ಪರ- ವಿರೋಧದ ವಾದ ಆಲಿಸಿದ ಕೋರ್ಟ್ ಅಂತಿಮವಾಗಿ ದೇಶಮುಖ್​ ಅವರ ಅರ್ಜಿಯನ್ನ ವಜಾ ಮಾಡಿತು. ದೇಶಮುಖ್​ ಅವರು ರಾಜ್ಯ ಸರ್ಕಾರ ತನಿಖಾ ಆಯೋಗ ರಚನೆ ಮಾಡಿದ ವೇಳೆ ರಾಜೀನಾಮೆ ನೀಡಿರಲಿಲ್ಲ. ಆದರೆ, ಹೈಕೋರ್ಟ್​ ಸಿಬಿಐ ತನಿಖೆಗೆ ಆದೇಶ ಮಾಡಿದ ಮೇಲೆ ರಾಜೀನಾಮೆ ನೀಡಿದ್ದಾರೆ ಎಂಬ ಅಂಶವನ್ನು ಸುಪ್ರೀಂ ಗಮನಿಸಿತು. ಅಷ್ಟೇ ಅಲ್ಲ ಆರೋಪ ಮಾಡಿದವರು ಮುಂಬೈ ಪೊಲೀಸ್​ ಆಯುಕ್ತರಾಗಿದ್ದವರು ಎಂಬುವುದನ್ನು ಸುಪ್ರೀಂಕೋರ್ಟ್​ ಗಣನೆಗೆ ತೆಗೆದುಕೊಂಡಿದೆ. ಅನಿಲ್​ ದೇಶಮುಖ್​ ಪರ ಹಿರಿಯ ವಕೀಲ ಕಪಿಲ್ ಸಿಬಲ್​​​ ವಾದ ಮಂಡಿಸಿದ್ದರು.

ABOUT THE AUTHOR

...view details