ನವದೆಹಲಿ :ಎಸ್‌ಬಿಐ ಸೇರಿದಂತೆ ದೇಶದ ವಿವಿಧ ಬ್ಯಾಂಕ್‌ಗಳಿಂದ 9 ಸಾವಿರ ಕೋಟಿ ಸಾಲ ಪಡೆದು ಲಂಡನ್‌ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯಗೆ ಸಂಕಷ್ಟ ಎದುರಾಗಿದೆ. ಮಲ್ಯ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಇಂದು ಹೇಳಿದೆ.
ಮಲ್ಯ ವಿರುದ್ಧದ ಪ್ರಕರಣಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಯು ಯು ಲಲಿತ್ ನೇತೃತ್ವದ ಪೀಠ, 2022ರ ಜನವರಿ 18ರಿಂದ ಪ್ರಕರಣಗಳ ವಿಚಾರಣೆಗೆ ಪಟ್ಟಿ ಮಾಡಲು ನಿರ್ಧರಿಸಿರುವುದಾಗಿ ಹೇಳಿದೆ.
ಬ್ರಿಟನ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದ ಅವರು ಮೇಲ್ಮನವಿಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದನ್ನು ಕೋರ್ಟ್ ಗಮನಿಸಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಗೌಪ್ಯತೆ ಎಂದು ಹೇಳಲಾದ ಕೆಲವು ಪ್ರಕ್ರಿಯೆಗಳಲ್ಲಿ ಯಾವುದೇ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ.
2020ರ ನವೆಂಬರ್ 2ರಂದು ನೀಡಿದ್ದ ಆದೇಶದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ದಾಖಲೆಯಲ್ಲಿರುವ ಎಲ್ಲಾ ಸಂದರ್ಭಗಳನ್ನು ಪರಿಗಣಿಸಿದ ನಂತರ, ಈ ನ್ಯಾಯಾಲಯವು ಹೊರಡಿಸಿದ ನಿರ್ದೇಶನಗಳ ವಿಷಯದಲ್ಲಿ 2022ರ ಜನವರಿ 18ರಂದು ಪಟ್ಟಿ ಮಾಡಲು ಕೋರ್ಟ್ ನಿರ್ದೇಶಿಸಿದೆ.
ಪಟ್ಟಿ ಮಾಡಿದ ದಿನದಂದು ಮಲ್ಯ ಅವರಿಗೆ ತಮ್ಮ ವಾದವನ್ನು ಮುಂದುವರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಯಾವುದೇ ತಾಂತ್ರಿಕ ಕಾರಣಗಳಿಂದ ನ್ಯಾಯಾಲಯದಲ್ಲಿ ಅವರು ವೈಯಕ್ತಿಕ ಉಪಸ್ಥಿತಿ ಇಲ್ಲದಿದ್ದರೆ ಅವರ ವಕೀಲರು ಮಲ್ಯ ಪರವಾಗಿ ಕೋರ್ಟ್‌ಗೆ ಹಾಜರಾಬೇಕೆಂದು ಹೇಳಿದೆ.
ಬೆಂಗಳೂರು ಮೂಲದ ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಂದ ಸುಮಾರು 9,000 ಕೋಟಿ ರೂಪಾಯಿಗಳ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದರು. ಬ್ಯಾಂಕ್‌ಗಳಿಗೆ ವಂಚಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಭಾರತಕ್ಕೆ ಬೇಕಾಗಿದ್ದಾರೆ. ನ್ಯಾಯಾಲಯದ ನಿಂದನೆ ಆರೋಪದಲ್ಲಿ ಮಲ್ಯ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ ಈ ಹಿಂದೆಯೇ ಘೋಷಿಸಿದೆ.
ಇದನ್ನೂ ಓದಿ:ನನ್ನ 6,200 ಕೋಟಿ ರೂ.ಸಾಲಕ್ಕೆ 14,000 ಕೋಟಿ ರೂ.ಮೌಲ್ಯದ ಆಸ್ತಿ ವಶ: ವಿಜಯ್ ಮಲ್ಯ ಅಸಮಾಧಾನ