ಕರ್ನಾಟಕ

karnataka

ETV Bharat / bharat

ಕೇರಳದ ಪತ್ರಕರ್ತ ಸಿದ್ಧಿಕ್ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

ಪತ್ರಕರ್ತ ಸಿದ್ಧಿಕ್ ಕಪ್ಪನ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್​ ನೇತೃತ್ವದ ಪೀಠವು ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಎಂದು ಹೇಳಿತು.

Supreme Court grants bail to Kerala journalist Siddique Kappan
ಕೇರಳದ ಪತ್ರಕರ್ತ ಸಿದ್ಧಿಕ್ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

By

Published : Sep 9, 2022, 5:10 PM IST

ನವದೆಹಲಿ: ಕೇರಳದ ಪತ್ರಕರ್ತ ಸಿದ್ಧಿಕ್ ಕಪ್ಪನ್‌ಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಅಲ್ಲದೇ, ಕಪ್ಪನ್‌ಗೆ ಆರು ವಾರಗಳ ಕಾಲ ದೆಹಲಿಯಲ್ಲಿದ್ದು, ನಂತರ ಕೇರಳಕ್ಕೆ ಹೋಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ನಿರ್ದೇಶಿಸಿದೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಸಂಬಂಧ 2020ರ ಅಕ್ಟೋಬರ್ 5 ರಂದು ಸಿದ್ಧಿಕ್ ಕಪ್ಪನ್ ಮತ್ತು ಇತರರು ಹತ್ರಾಸ್‌ಗೆ ಹೋಗುತ್ತಿದ್ದಾಗ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿಸಿದ್ದರು. ಇದರಿಂದ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಸಿದ್ಧಿಕ್ ಕಪ್ಪನ್‌ ಅರ್ಜಿ ಸಲ್ಲಿಸಿದ್ದರು. ಆದರೆ, ಕಪ್ಪನ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್​ ಪೀಠ ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಪಿಎಫ್​​​ಐ ನಂಟು ಆರೋಪದಡಿ ಬಂಧನ: ಸುಪ್ರೀಂ ಮೆಟ್ಟಿಲೇರಿದ ಕೇರಳ ಪತ್ರಕರ್ತರ ಒಕ್ಕೂಟ

ಇಂದು ಸಿದ್ಧಿಕ್ ಕಪ್ಪನ್‌ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್​ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಎಂದು ಹೇಳಿತು. ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂದು ಕಪ್ಪನ್​ ಪ್ರಯತ್ನಿಸುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಬಹುದೇ ಎಂದೂ ಪೊಲೀಸರ ಕ್ರಮದ ಬಗ್ಗೆ ನ್ಯಾಯ ಪೀಠ ಪ್ರಶ್ನೆ ಎತ್ತಿತ್ತು.

ಈ ವೇಳೆ ರಾಜ್ಯ ಸರ್ಕಾರದ ಪರವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಗಲಭೆಗಳನ್ನು ಪ್ರಚೋದಿಸಲು ಹತ್ರಾಸ್‌ಗೆ ಹೋಗಲು ನಿರ್ಧರಿಸಿದ್ದರು ಎಂದು ಹೇಳಿದರು. ಆಗ ನ್ಯಾಯ ಪೀಠವು 2011ರಲ್ಲಿ ಇಂಡಿಯಾ ಗೇಟ್‌ನಲ್ಲಿ ನಿರ್ಭಯಾ ಪ್ರಕರಣದಲ್ಲೂ ಪ್ರತಿಭಟನೆಗಳು ನಡೆದ್ದವು ಎಂದು ನೆನಪು ಮಾಡಿತ್ತು. ಕೆಲವೊಮ್ಮೆ ಬದಲಾವಣೆ ತರಲು ಪ್ರತಿಭಟನೆಗಳು ಬೇಕಾಗುತ್ತದೆ. ಆ ನಂತರ ಕಾನೂನುಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಇದೇ ಪ್ರತಿಭಟನೆಗಳು.. ಎಂದು ನ್ಯಾಯ ಪೀಠ ತಿಳಿಸಿತು.

ಇದನ್ನೂ ಓದಿ:ನನ್ನ ಗಂಡನನ್ನು ಮೂತ್ರ ವಿಸರ್ಜನೆಗೂ ಕೂಡ ಬಿಡುತ್ತಿಲ್ಲ: ಪತ್ರಕರ್ತ ಸಿದ್ದೀಕ್ ಕಪ್ಪನ್ ಪತ್ನಿಯಿಂದ ನ್ಯಾಯಕ್ಕೆ ಮನವಿ

ನ್ಯಾಯಾಲಯಕ್ಕೆ ರಾಜ್ಯ ಸರ್ಕಾರವು ಅರ್ಜಿದಾರ ಕಪ್ಪನ್ ಸಿಎಫ್‌ಐನ ಮನಿ ಲಾಂಡರಿಂಗ್ ಪ್ರಕರಣದ ಸಹ ಆರೋಪಿಗಳೊಂದಿಗೆ ಧಾರ್ಮಿಕ ವೈಷಮ್ಯ ಮತ್ತು ಹರಡುವಿಕೆಗೆ ದೊಡ್ಡ ಪಿತೂರಿಯ ಭಾಗವಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪಿಎಫ್​​ಐ ಜೊತೆಗೆ ನಂಟು ಹೊಂದಿದ್ದಾರೆ. ಈ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಪ್ಪನ್ ಲ್ಯಾಪ್‌ಟಾಪ್ ಮತ್ತು ದೆಹಲಿಯಲ್ಲಿರುವ ಅವರ ಬಾಡಿಗೆ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಲಿಖಿತ ಹೇಳಿಕೆಯನ್ನು ಸಲ್ಲಿಸಿತ್ತು.

ಇತ್ತ, ಪತಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪತ್ನಿ ರೈಹಾನಾಥ್ ಪ್ರತಿಕ್ರಿಯಿಸಿದ್ದು, ನ್ಯಾಯಾಲಯವು ಸಿದ್ಧಿಕ್ ಕಪ್ಪನ್‌ ನಿರಪರಾಧಿ ಎಂದು ಪರಿಗಣಿಸಿದೆ ಎಂದು ಹೇಳಿದ್ದಾರೆ. ಕಪ್ಪನ್ ನಿರಪರಾಧಿ ಎಂದು ನ್ಯಾಯಾಲಯವು ಪತ್ತೆ ಮಾಡಿರುವುದರಿಂದ ಜಾಮೀನು ನೀಡಲಾಗಿದೆ. ಎರಡು ವರ್ಷಗಳು ತುಂಬಾ ಕಠಿಣ ದಿನಗಳನ್ನು ಎದುರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ನಿ ಶಾಲಿನಿಗೆ ಹನಿ ಸಿಂಗ್ ವಿಚ್ಛೇದನ: 1 ಕೋಟಿ ರೂ. ಜೀವನಾಂಶದ ಚೆಕ್ ಹಸ್ತಾಂತರ

ABOUT THE AUTHOR

...view details