ಹೈದರಾಬಾದ್ :ಸರ್ಕಾರ ಮತ್ತು ಸಿಎಂ ಜಗನ್ ವಿರುದ್ಧ ತೀಕ್ಷ್ಣವಾಗಿ ಟೀಕೆ ಮಾಡಿದ್ದ ಸಂಸದ ರಘುರಾಮ್ ಕೃಷ್ಣರಾಜುಗೆ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಿಎಂ ಜಗನ್ ವಿರುದ್ಧ ಟೀಕಿಸಿದ್ದ ಕಾರಣಕ್ಕೆ ಆಂಧ್ರಪ್ರದೇಶ ಪೊಲೀಸರು ದೇಶದ್ರೋಹ ಪ್ರಕರಣದಡಿ ಸಂಸದರನ್ನು ಬಂಧಿಸಿದ್ದರು. ಪೊಲೀಸ್ ಕಷ್ಟಡಿಗೆ ನೀಡುವಷ್ಟು ಪ್ರಕರಣ ಗಂಭೀರವಾಗಿಲ್ಲ. ಅಲ್ಲದೆ ಲೋಕಸಭೆ ಸದಸ್ಯರನ್ನು ಪೊಲೀಸರು ಪ್ರಶ್ನಿಸುವ ಅಗತ್ಯವೂ ಇಲ್ಲ ಎಂದು ತಿಳಿಸಿದೆ.
ಅಲ್ಲದೆ ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ನಾವು ಜಾಮೀನು ನೀಡುತ್ತಿದ್ದೇವೆ. ಪ್ರಕರಣದ ತನಿಖೆಯಲ್ಲಿ ರಘುರಾಮ್ ಕೃಷ್ಣರಾಜು ಸಹಕರಿಸಬೇಕು. ಅರ್ಜಿದಾರರು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮುಂದೆ ಮಾತನಾಡಬಾರದು.
ತನಿಖಾ ಅಧಿಕಾರಿಗಳು ಅರ್ಜಿದಾರರಿಗೆ ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಅರ್ಜಿದಾರರು ಕಾನೂನು ಸಲಹೆಗಾರರ ಸಮ್ಮುಖದಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗಬಹುದು ಎಂದು ಷರತ್ತುಗಳನ್ನ ವಿಧಿಸಿದೆ.
ಇದನ್ನೂ ಓದಿ:ತತ್ತ್ವಗಳಿಲ್ಲದ ರಾಜಕೀಯ ಕೊನೆಗೊಳಿಸುವುದು ರಾಜೀವ್ ಗಾಂಧಿ ಆಡಳಿತದ ಗುರಿಯಾಗಿತ್ತು : ಖರ್ಗೆ