ಕರ್ನಾಟಕ

karnataka

ETV Bharat / bharat

ಪೆಗಾಸಸ್‌ ಗೂಢಚಾರಿಕೆ ತನಿಖೆಗೆ ಸ್ವತಂತ್ರ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್​​ - ಸುಪ್ರೀಂಕೋರ್ಟ್​ನಿಂದ ತನಿಖಾ ಸಂಸ್ಥೆ ನೇಮಕ

ಪೆಗಾಸಸ್ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಸಮಿತಿಗೆ ಮುಖ್ಯಸ್ಥರಾಗಿರಲಿದ್ದಾರೆ.

Supreme Court Forms Committee To Probe Pegasus
Pegasus Row: ಸ್ವತಂತ್ರ ತನಿಖಾ ಸಮಿತಿಯನ್ನು ನೇಮಿಸಿದ ಸುಪ್ರೀಂಕೋರ್ಟ್​​

By

Published : Oct 27, 2021, 11:25 AM IST

ನವದೆಹಲಿ:ದೇಶದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಇಸ್ರೇಲ್ ಮೂಲದ ಪೆಗಾಸಸ್​ ಆ್ಯಪ್​ ಮೇಲೆ ಗೂಢಚಾರಿಕೆ ಆರೋಪ ಪ್ರಕರಣ ಕುರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗಿದ್ದು, ತಜ್ಞರ ಸಮಿತಿ ರಚಿಸಿ, ತನಿಖೆಗೆ ಆದೇಶ ನೀಡಿದೆ.

ಮೂವರು ತಜ್ಞರ ಸಮಿತಿಯನ್ನು ಸುಪ್ರೀಂಕೋರ್ಟ್ ರಚಿಸಿದ್ದು, ಈ ಸಮಿತಿಗೆ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮುಖ್ಯಸ್ಥರಾಗಿರಲಿದ್ದಾರೆ. ಅಲೋಕ್ ಜೋಷಿ ಮತ್ತು ಸಂದೀಪ್ ಒಬೇರಾಯ್ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ.

ಆರೋಪಗಳನ್ನು ಕೂಲಂಕಷವಾಗಿ ತನಿಖೆ ನಡೆಸಿ, 8 ವಾರಗಳ ನಂತರ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಬೇಕೆಂದು ತನಿಖಾ ಸಮಿತಿಗೆ ಸೂಚನೆ ನೀಡಲಾಗಿದೆ.

ಕೋರ್ಟ್​ನಿಂದ ನಿಗಾವಹಿಸುವ ಸ್ವತಂತ್ರ ತನಿಖಾ ಸಂಸ್ಥೆಯನ್ನು ರಚಿಸಿ, ಪೆಗಾಸಸ್ ಪ್ರಕರಣವನ್ನು ನಡೆಸಬೇಕೆಂದು ಕೋರಿದ್ದ ಅರ್ಜಿಗಳನ್ನು ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಪರಾಭವಗೊಂಡ ಬಳಿಕ ಸಂಭ್ರಮಾಚರಣೆ: ಸ್ಕಾಲರ್​ಶಿಪ್​ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳ ಅಮಾನತು

ABOUT THE AUTHOR

...view details