ರೇವಾ, ಮಧ್ಯಪ್ರದೇಶ:ದೇಶದಲ್ಲಿ ಈ ಕಾಲದಲ್ಲೂ ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಇತ್ತಿಚೇಗೆ ಮೂಢನಂಬಿಕೆ ಪ್ರಕರಣ ಬೆಳಕಿಗೆ ಬಂದಿದೆ. ರೇವಾ ಜಿಲ್ಲೆಯ ಸಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯವೊಂದು ಕಂಡು ಬಂದಿದೆ. ದೇವಿ ದೇವಸ್ಥಾನದಲ್ಲಿ 1 ತಿಂಗಳ ಹಿಂದೆ ಮೃತಪಟ್ಟ 4 ವರ್ಷದ ಮಗುವನ್ನು ಬದುಕಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನೂರಾರು ಗ್ರಾಮಸ್ಥರು ಗ್ರಾಮದಲ್ಲಿರುವ ಕುಲ್ ದೇವಿಯ ದೇವಸ್ಥಾನದಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿದ್ದಾರೆ.
ಒಂದು ತಿಂಗಳ ಹಿಂದೆ ಮೃತಪಟ್ಟ ಮಗು: ಒಂದು ತಿಂಗಳ ಹಿಂದೆ ರೇವಾ ಜಿಲ್ಲೆಯ ಗುಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭಿತಿ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬದ ನಾಲ್ಕು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಮಗುವನ್ನು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಕನಸಿನಲ್ಲಿ ಬಂದ ದೇವಿಯು ಮಗುವನ್ನು ಮತ್ತೆ ಬದುಕಿಸಲು ವರವನ್ನು ನೀಡಿದ್ದಾಳೆ ಎಂದು ಕುಟುಂಬ ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ತಾಯಿಯ ಸಲಹೆಯಂತೆ ಗ್ರಾಮದಿಂದ 20 ಕಿಮೀ ದೂರದಲ್ಲಿರುವ ಬಕ್ಷೇರಾ ಗ್ರಾಮದಲ್ಲಿ ನೆಲೆಸಿರುವ ಕುಲದೇವಿಯ ಪೂಜೆಯಲ್ಲಿ ತೊಡಗಿದ್ದರು. ಈ ಪ್ರಸಂಗ ನೋಡಲು ನೂರಾರು ಜನರು ದೇವಾಲಯದ ಮುಂದೆ ಜಮಾಯಿಸಿದ್ದಾರೆ.
ನಿಮ್ಮ ಮಗ ಬದುಕುತ್ತಾನೆ ಎಂದ ಮಾತೆ:ಮಗುವನ್ನು ಸಮಾಧಿ ಮಾಡಿದ ಸ್ಥಳದಿಂದ ಮಣ್ಣನ್ನು ತಂದು ಕುಲದೇವಿ ದೇವಸ್ಥಾನದಲ್ಲಿ ಮಾತೆ ತಾಯಿಯ ಪಾದಮೇಲೆ ಇಡಿ ಎಂದು ತಾಯಿ ಕನಸಿನಲ್ಲಿ ಹೇಳಿದ್ದಾಳೆ. ಹೀಗಾಗಿ ಕುಟುಂಬ ಸದಸ್ಯರು ಸಮಾಧಿಯಿಂದ ಕೆಂಪು ಬಟ್ಟೆಯಲ್ಲಿ ಮಣ್ಣನ್ನು ತಂದು ಮಾತೃದೇವತೆಯ ಪಾದಗಳ ಮುಂದೆ ಇಟ್ಟಿದ್ದೇವೆ. ಮಣ್ಣು ಮೊದಲು ಹೂವಾಯಿತು. ಹೂವು ಎಲುಬು ಆಗಿದೆ. ಈಗ ಅದಕ್ಕೆ ಜೀವ ಬರಲು ಕಾಯುತ್ತಿದ್ದೇವೆ ಎಂದು ಮೃತ ಮಗುವಿನ ಸಂಬಂಧಿಕರ ಮಾತಾಗಿದೆ.