ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್ ಕ್ಷಿಪಣಿ ನೆರವಿನ ಟಾರ್ಪಿಡೊ ಸಿಸ್ಟಂ ಅನ್ನು ಇಂದು ಒಡಿಶಾದ ವೀಲರ್ ದ್ವೀಪದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಈ ಮಾದರಿಯು ಮುಂದಿನ ಪೀಳಿಗೆಯ ಕ್ಷಿಪಣಿ ಆಧಾರಿತ ಸ್ಟ್ಯಾಂಡ್ ಆಫ್ ಟಾರ್ಪಿಡೊ ಸುಧಾರಿತ ವ್ಯವಸ್ಥೆಯಾಗಿರಲಿದೆ. ಉಡಾವಣೆ ವೇಳೆ ಕ್ಷಿಪಣಿಯು ಪೂರ್ಣ ಪ್ರಮಾಣದ ಸಾಮರ್ಥ್ಯದ ಪ್ರಾತ್ಯಕ್ಷಿಕೆ ನೀಡಿದೆ. ಜಲಾಂತರ್ಗಾಮಿ ಯುದ್ಧ ನೌಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ.
ಎಲೆಕ್ಟ್ರೋ ಆಪ್ಟಿಕ್ ಟೆಲಿಮೆಟ್ರಿ ಸಿಸ್ಟಮ್, ರಾಡಾರ್‌ಗಳು, ಡೌನ್ ರೇಂಜ್ ಇನ್‌ಸ್ಟ್ರುಮೆಂಟೇಶನ್ ಮತ್ತು ಡೌನ್ ರೇಂಜ್ ಹಡಗುಗಳ ಮೇಲ್ವಿಚಾರಣೆಯಲ್ಲಿ ಉಡಾವಣೆ ಮಾಡಲಾಯಿತು. ಈ ಕ್ಷಿಪಣಿ ವ್ಯವಸ್ಥೆಯು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ.