ಚೆನ್ನೈ: ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ಫೆಬ್ರವರಿ 7 ರಂದು ಕಿಂಗ್ಸ್ ಹೋಟೆಲ್ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದರು. ದೀರ್ಘ ಸಮಯದ ನಂತರ ಅವರನ್ನು ಕಂಡು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.
ರಜಿನಿಕಾಂತ್ ಅವರು ತಮ್ಮ ಪತ್ನಿ ಲತಾ ಮತ್ತು ಕಿರಿಯ ಪುತ್ರಿ ಸೌಂದರ್ಯ ಅವರೊಂದಿಗೆ ಕಿಂಗ್ಸ್ ಹೋಟೆಲ್ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದರು. ಅಣ್ಣಾತ್ತೆ ಚಿತ್ರದ ಚಿತ್ರೀಕರಣದ ವೇಳೆಯೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಸಾರ್ವಜನಿಕ ಸಮಾರಂಭದಲ್ಲಿ ರಜಿನಿಕಾಂತ್ ಅವರನ್ನು ನೋಡಿ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.