ಕರ್ನಾಟಕ

karnataka

ETV Bharat / bharat

10 ಸಾವಿರ ದೆಹಲಿ ವಲಸಿಗರಿಗೆ ಊಟ ನೀಡಲು PETA ಜೊತೆ ಕೈಜೋಡಿಸಿದ ಸನ್ನಿ ಲಿಯೋನ್ - 10 ಸಾವಿರ ದೆಹಲಿ ವಲಸಿಗರಿಗೆ ಊಟ ನೀಡಲು PETA ಜೊತೆ ಕೈಜೋಡಿಸಿದ ಸನ್ನಿ ಲಿಯೋನ್

ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೆಹಲಿಯ 10,000 ವಲಸಿಗರಿಗೆ ಊಟದ ವ್ಯವಸ್ಥೆ ಮಾಡಲು ಪೆಟಾ ಸಂಸ್ಥೆ ಜೊತೆ ಬಾಲಿವುಡ್​ ನಟಿ ಸನ್ನಿ ಲಿಯೋನ್ ಕೈ ಜೋಡಿಸಿದ್ದಾರೆ.

Sunny Leone
ಸನ್ನಿ ಲಿಯೋನ್

By

Published : May 6, 2021, 12:05 PM IST

ನವದೆಹಲಿ: ಕೋವಿಡ್​ ಲಾಕ್​ಡೌನ್​ನಿಂದಾಗಿ ಒಂದೊತ್ತಿನ ಅನ್ನಕ್ಕೂ ಪರದಾಡುತ್ತಿರುವ ರಾಷ್ಟ್ರ ರಾಜಧಾನಿಯ ವಲಸೆ ಕಾರ್ಮಿಕರಿಗೆ ನೆರವಾಗಲು ಬಾಲಿವುಡ್​ ನಟಿ ಸನ್ನಿ ಲಿಯೋನ್ ಮುಂದಾಗಿದ್ದಾರೆ.

ದೆಹಲಿಯ 10,000 ವಲಸಿಗರಿಗೆ ಊಟದ ವ್ಯವಸ್ಥೆ ಮಾಡಲು ಪೆಟಾ ಸಂಸ್ಥೆ (PETA -ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಜೊತೆ ನಟಿ ಕೈ ಜೋಡಿಸಿದ್ದಾರೆ. ಅಕ್ಕಿ-ಬೇಳೆಯಿಂದ ತಯಾರಿಸುವ ಖಿಚಡಿ ಹಾಗೂ ಹಣ್ಣುಗಳನ್ನು ಈ ಆಹಾರದ ಕಿಟ್​ ಅನ್ನು ಒಳಗೊಂಡಿರುತ್ತದೆ. ಉದಯ್ ಫೌಂಡೇಶನ್ ಮೂಲಕ ಪೆಟಾ ಮತ್ತು ಸನ್ನಿ ಆಹಾರವನ್ನು ದಾನ ಮಾಡಲಿದ್ದಾರೆ.

ಇದನ್ನೂ ಓದಿ: ದೆಹಲಿಯ 72 ಲಕ್ಷ ಪಡಿತರ ಚೀಟಿದಾರರಿಗೆ ಮುಂದಿನ ಎರಡು ತಿಂಗಳು ರೇಷನ್​ ಫ್ರೀ..!!

"ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ, ಆದರೆ ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ನಾವು ಮುಂದೆ ಬರಬೇಕು. ಕೊರೊನಾದ ಸಮಯದಲ್ಲಿ ಅಗತ್ಯವಿರುವ ಸಾವಿರಾರು ಜನರಿಗೆ ಪ್ರೋಟೀನ್​ಯುಕ್ತ ಸಸ್ಯಾಹಾರಿ ಊಟವನ್ನು ನೀಡಲು ಮತ್ತೆ ಪೆಟಾ ಇಂಡಿಯಾದೊಂದಿಗೆ ಕೈಜೋಡಿಸಲು ನನಗೆ ಸಂತೋಷವಾಗಿದೆ" ಎಂದು ಸನ್ನಿ ಲಿಯೋನ್​​ ಹೇಳಿದ್ದಾರೆ.

ಪೆಟಾ ಸಂಸ್ಥೆಯ ಅನೇಕ ಸಮಾಜಪರ ಅಭಿಯಾನಗಳಲ್ಲಿ ತೊಡಗಿದ್ದ ಸನ್ನಿ ಲಿಯೋನ್​​ರನ್ನು 2016 ರಲ್ಲಿ 'ಪೆಟಾ ಇಂಡಿಯಾಸ್​ ಪರ್ಸನ್​ ಆಫ್​ ದಿ ಇಯರ್​' ಎಂದು ಘೋಷಿಸಲಾಗಿತ್ತು.

ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮೇ 10 ರವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿದೆ.

ABOUT THE AUTHOR

...view details