ಹೈದರಾಬಾದ್: ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮಧುಬನ್ ವಿಡಿಯೋ ಸಾಂಗ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಆದ್ರೆ ಉತ್ತರ ಪ್ರದೇಶ ಮಥುರಾಗೆ ಸೇರಿದ ಕೆಲ ಪುರೋಹಿತರು ಈ ಹಾಡನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ.
ಸನ್ನಿ ಲಿಯೋನ್ 'ಮಧುಬನ್' ಹಾಡಿಗೆ ಪುರೋಹಿತರ ವಿರೋಧ..! - ಸನ್ನಿ ಮಧುಬನ್ ಹಾಡು
ಬಾಲಿವುಡ್ ಬ್ಯೂಟಿ ಕ್ವೀನ್ ಸನ್ನಿ ಲಿಯೋನ್ ಆಲ್ಬಮ್ ಸಾಂಗ್ 'ಮಧುಬನ್' ಬಿಡುಗಡೆಯಾಗಿದೆ. ಆದ್ರೆ ಈ ವಿಡಿಯೋವನ್ನು ಯೂಟ್ಯೂಬ್ನಿಂದ ತೆಗೆದು ಹಾಕುವಂತೆ ಕೆಲವು ಪುರೋಹಿತರು ಆಗ್ರಹಿಸಿದ್ದಾರೆ. ಈ ಹಾಡು ಹಿಂದೂಗಳ ಭಾವನೆಗೆ ದಕ್ಕೆ ತರುತ್ತದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಸನ್ನಿ ಮಧುಬನ್ ಹಾಡು 1960ರಲ್ಲಿ ಬಿಡುಗಡೆಯಾದ ಹಿಂದಿ 'ಕೋಹಿನೂರು' ಸಿನಿಮಾದ ಹಾಡು. ಈ ಹಾಡನ್ನು ದಿಗ್ಗಜ ಸಿಂಗರ್ ಮಹಮ್ಮದ್ ರಫಿ ಹಾಡಿದ್ದಾರೆ. ಸದ್ಯ ಈ ಹಾಡನ್ನ ರಿಮಿಕ್ಸ್ ಮಾಡಿ ಆಲ್ಬಮ್ ಸಾಂಗ್ ತಯಾರಿಸಿ ಬಿಡುಗಡೆ ಮಾಡಲಾಗಿದೆ.
ಈ ಹಾಡು ರಾಧಾ ಮತ್ತು ಕೃಷ್ಣನ ನಡುವಿನ ಪ್ರೀತಿಯನ್ನು ವಿವರಿಸುವ ಸಾಹಿತ್ಯವನ್ನು ಹೊಂದಿದೆ. ಇಂತಹ ಹಾಡಿಗೆ ಸನ್ನಿ ಸ್ಟೆಪ್ ಹಾಕಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹಲವು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸರ್ಕಾರ ಈ ವಿಡಿಯೋವನ್ನು ನಿಷೇಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬೃಂದಾವನ ಸಂತ ನವಲ ಗಿರಿ ಮಹಾರಾಜ್ ಹೇಳಿದ್ದಾರೆ.