ಉಜ್ಜೈನಿ/ಮಧ್ಯಪ್ರದೇಶ: ಇಡೀ ಪ್ರಪಂಚವೇ ಕೊರೊನಾ ವ್ಯಾಕ್ಸಿನ್ ಪಡೆಯಲು ಕಾದು ಕುಳಿತಿದೆ. ಮಾಹಾಮಾರಿ ಕೋವಿಡ್ ವೈರಸ್ಗೆ ಲಸಿಕೆ ಬಂದಿದ್ದೇ ತಡ, ಜನರು ಲಸಿಕೆ ಹಾಕಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಸುನ್ನಿ ಮುಸ್ಲಿಂ ಸೊಸೈಟಿಯು ಸುನ್ನಿ ಉಲೇಮಾ ಕಲಾಂ ಮತ್ತು ಅವರ ವೈದ್ಯರ ತಂಡದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ತಮ್ಮ ವೈದ್ಯರು ಹೇಳುವ ತನಕ ವ್ಯಾಕ್ಸಿನೇಷನ್ಗೆ ಒಳಗಾಗಲು ಯಾರಿಗೂ ಅವಕಾಶವಿಲ್ಲ ಎಂದು ಸುನ್ನಿ ಮುಸ್ಲಿಂ ಸೊಸೈಟಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಸುನ್ನಿ ಸೊಸೈಟಿಯ ಧರ್ಮಗುರು ಮಹಬೂಬ್ ಆಲಮ್, ಕೊರೊನಾ ಲಸಿಕಾ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವವರಿಗಿಂತ ನಮ್ಮ ವೈದ್ಯರು ಹೆಚ್ಚು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ಹೇಳಿದ ಬಳಿಕವೇ, ಅವರಿಂದ ಫತ್ವಾ ಬಂದ ಬಳಿಕವೇ ಕೊರೊನಾ ಲಸಿಕೆ ಪಡೆಯುವುದಾಗಿ ಅವರು ಹೇಳಿದ್ರು.