ಕೋಝಿಕ್ಕೋಡ್ (ಕೇರಳ) : ಕಳೆ ಹಲವು ವರ್ಷಗಳಿಂದ ಆಹಾರ ಸೇವನೆಯಿಲ್ಲದೆ ಬದುಕಿದ್ದ ಹೀರಾ ರತನ್ ಮಾಣೆಕ್ ಅವರು 84 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸೂರ್ಯನ ಬೆಳಕಿನ ಶಕ್ತಿಯ ಪ್ರಚಾರಕ ಹಾಗೂ ಗುಜರಾತಿ ಉದ್ಯಮಿಯಾಗಿರುವ ಅವರು ಕೋಝಿಕೋಡ್‌ನ ಚಕೋರತುಕುಲಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನಿಧನರಾಗಿದ್ದಾರೆ.
ಮಾಣೆಕ್ ಅವರು 1995 ರಲ್ಲಿ ಈ ವಿಶಿಷ್ಟ ಉಪವಾಸದ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದರು. ಅಂದಿನಿಂದ ಸೌರ ಶಕ್ತಿ ಮತ್ತು ನೀರನ್ನು ಮಾತ್ರ ಬಳಸಿಕೊಂಡು ತಮ್ಮ ಬದುಕನ್ನು ಸಾಗಿಸುತ್ತಿದ್ದರು.
ಬಾಹ್ಯಾಕಾಶ ಪರಿಶೋಧನೆ ಇವರ ಪ್ರಯೋಗಕ್ಕೆ ಸಹಕಾರಿ:ಜುಲೈನಿಂದ ನವೆಂಬರ್ 2002 ರವರೆಗೆ, ಅಮೆರಿಕನ್ ಬಾಹ್ಯಾಕಾಶ ಕೇಂದ್ರ NASA ಅವರನ್ನು ಆಹ್ವಾನಿಸಿತ್ತು. ಅವರ ಮೇಲೆ ಸಂಶೋಧನೆ ಕೂಡ ನಡೆಸಿತು. ಮಾನವರು ಬಾಹ್ಯಾಕಾಶ ಪರಿಶೋಧನೆಗೆ ಹೋದಾಗ ಹೀರಾ ರತನ್ ಅವರ ಜೀವನ ಪರಿಸ್ಥಿತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಅಧ್ಯಯನವನ್ನು ಆ ವೇಳೆ ಮಾಡಲಾಗಿತ್ತು.
ಸೂರ್ಯನ ಬೆಳಕನ್ನು ಆಹಾರವಾಗಿ ಪರಿವರ್ತಿಸಿಕೊಂಡಿದ್ದರು:ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಅದು ಚಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನಿಂದ ನೀವು ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೆ ಕೇವಲ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಮಾಣೆಕ್ ಹೇಳಿದ್ದರು. ಹಾಗೆ ಅದನ್ನು ಸಾಬೀತುಪಡಿಸಿದ್ದರು.
ಮಾಣೆಕ್ ಹುಟ್ಟಿ ಬೆಳೆದದ್ದು ಕೋಯಿಕ್ಕೋಡ್ನಲ್ಲಿ. ಇವರ ಕುಟುಂಬವು ಮೂಲತಃ ಗುಜರಾತ್‌ನ ಕಚ್‌ನಿಂದ ಇಲ್ಲಿಗೆ ವಲಸೆ ಬಂದಿತ್ತು. ಹಡಗು ಉದ್ಯಮಿಯಾಗಿದ್ದ ಅವರು, 1962 ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದಾಗ ಸೌರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ನಂತರ, ಸ್ವ ಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಉಕ್ರೇನ್ನಿಂದ ತಾತ್ಕಾಲಿಕವಾಗಿ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ
ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು:ಮಾಣೆಕ್ ಅವರು 1992 ರಿಂದ ಪೂರ್ಣ ಪ್ರಮಾಣದ ಸೂರ್ಯನ ಆರಾಧಕರಾಗಿದ್ದರು. ಸೂರ್ಯೋದಯದ ಒಂದು ಗಂಟೆಯ ನಂತರ ಮತ್ತು ಸೂರ್ಯಾಸ್ತದ ಒಂದು ಗಂಟೆಯ ಮೊದಲು ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅವರ ಆರಾಧನಾ ಕ್ರಮವಾಗಿತ್ತು.