ಮೇಷ: ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ. ಆದರೆ, ಕಠಿಣ ನಿರ್ಧಾರ ನಿಮಗೆ ಬದ್ಧರಾಗಿರಲು ನೆರವಾಗುತ್ತದೆ. ಭಾವನಾತ್ಮಕತೆ ನಿಮ್ಮ ಉದ್ದೇಶವನ್ನು ಅಲ್ಲಾಡಿಸುತ್ತದೆ. ಆದರೆ ಒಮ್ಮೆ ನಿರ್ಧರಿಸಿದ ನಂತರ ನೀವು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ. ಅಲ್ಲದೆ, ನಿಮ್ಮ ದಾಪುಗಾಲು ಇಡುವಲ್ಲಿ ಆಘಾತವನ್ನು ತಡೆದುಕೊಳ್ಳಲು ಕಲಿಯಿರಿ.
ವೃಷಭ: ನೀವು ಹೊಸ ಯೋಜನೆ ಪ್ರಾರಂಭಿಸುವುದನ್ನು ತಡ ಮಾಡಬಹುದು. ಇಂದು ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಯಾಣ ಮಾಡಬಹುದು. ಹೇಗೆ ಆದರೂ ಇದು ನಿಮ್ಮ ಜೇಬಿಗೆ ಭಾರವೇ ಸರಿ.
ಮಿಥುನ:ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ಅದ್ಭುತ ಸಮಯ ಕಳೆಯುತ್ತೀರಿ.
ಕರ್ಕಾಟಕ:ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.
ಸಿಂಹ:ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ಅದೃಷ್ಟ ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ, ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.
ಕನ್ಯಾ:ಹಣಕಾಸಿನ ವಿಷಯದಲ್ಲಿ ನೀವು ಕೆಲ ಅಡೆತಡೆಗಳನ್ನು ಎದುರಿಸಬಹುದು. ನಿಮ್ಮ ಹೃದಯವನ್ನಲ್ಲ, ಮನಸ್ಸಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿ. ನಿಮ್ಮ ಬೆಲೆಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ. ಹೊಸ ಯೋಜನೆಗಳು ಮತ್ತು ಕಾನೂನು ಕರ್ತವ್ಯಗಳ ಕುರಿತು ಮಾತನಾಡುವಾಗ, ನೀವು ಏನು ಮಾಡಲು ನಿರ್ಧರಿಸಿದ್ದೀರಿ ಎಂದು ತಿಳಿದಿರಿ. ಏಕೆಂದರೆ, ಅದು ನಿಮ್ಮ ಮೇಲೆ ಸುದೀರ್ಘ ಪರಿಣಾಮ ಬೀರಬಹುದು.