ಕರ್ನಾಟಕ

karnataka

ETV Bharat / bharat

ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ದೆಹಲಿ ಕೋರ್ಟ್‌ನಿಂದ ಕ್ಲೀನ್‌ಚಿಟ್ - ಕಾಂಗ್ರೆಸ್‌ ನಾಯಕ ಶಶಿ ತರೂರ್

ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಪತಿ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ದೆಹಲಿ ರೋಸ್‌ ಅವೆನ್ಯೂ ಕೋರ್ಟ್‌ ದೋಷಮುಕ್ತಗೊಳಿಸಿದೆ.

Sunanda Pushkar Death Case: The court refused to frame charges against Shashi Tharoor and cleared him of all charges.
ಸುನಂದಾ ಪುಷ್ಕರ್ ಸಾವು ಪ್ರಕರಣ; ಶಶಿ ತರೂರ್ ಖುಲಾಸೆಗೊಳಿ ದೆಹಲಿ ಕೋರ್ಟ್‌ ಆದೇಶ

By

Published : Aug 18, 2021, 12:00 PM IST

Updated : Aug 18, 2021, 12:13 PM IST

ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಹಾಗೂ ಪುಷ್ಕರ್‌ ಪತಿ ಶಶಿ ತರೂರ್ ಅವರನ್ನು ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ಆರೋಪ ಮುಕ್ತಗೊಳಿಸಿದೆ. 2014ರ ಜನವರಿ 17 ರಂದು ದೆಹಲಿಯ ಐಷಾರಾಮಿ ಹೋಟೆಲ್‌ನ ಕೊಠಡಿಯಲ್ಲಿ ಸುನಂದಾ ಪುಷ್ಕರ್ ಮೃತದೇಹ ಪತ್ತೆಯಾಗಿತ್ತು.

ಸುನಂದಾ ಸಾವು ಮತ್ತು ಕ್ರೌರ್ಯಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಶಶಿ ತರೂರ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸದ್ಯ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಮುಕ್ತಗೊಳಿಸಿರುವ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

ದೆಹಲಿ ಕೋರ್ಟ್‌ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಶಶಿ ತರೂರ್‌, ಕೋರ್ಟ್ ಆದೇಶಕ್ಕೆ ಅತ್ಯಂತ ಕೃತಜ್ಞನಾಗಿದ್ದೇನೆ. ಇದು ಏಳೂವರೆ ವರ್ಷಗಳ ಹಿಂಸೆಯಾಗಿತ್ತು. ನಾನು ಆದೇಶವನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಎಂದಿದ್ದಾರೆ.

ಆರೋಪ ಸಾಬೀತುಪಡಿಸಲು ಸಿಗದ ಸಾಕ್ಷ್ಯ

ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ(SIT) ಶಶಿ ತರೂರ್‌ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ದೊರೆಯದ ಕಾರಣ, ಕಕ್ಷಿದಾರರನ್ನು ಮುಕ್ತಗೊಳಿಸಬೇಕು ಎಂದು ತರೂರ್‌ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು.

Last Updated : Aug 18, 2021, 12:13 PM IST

ABOUT THE AUTHOR

...view details