ಕರ್ನಾಟಕ

karnataka

By

Published : Mar 18, 2022, 10:44 AM IST

ETV Bharat / bharat

ಸುಡು ಬೇಸಿಗೆ ಎದುರಿಸಲು ಈ ಮೃಗಾಲಯ ಸನ್ನದ್ಧ.. ಹೇಗಿದೆ ವ್ಯವಸ್ಥೆ ಗೊತ್ತಾ?

ಸುಡು ಬಿಸಿಲು ಏರುತ್ತಿದ್ದು, ಭುವನೇಶ್ವರದ ನಂದನ್‌ಕನನ್ ಝೂಲಾಜಿಕಲ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭವಾಗಿದೆ.

Summer management started in Bhubaneswar Nandankanan zoo
ನಂದನ್‌ಕನನ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭ

ಭುವನೇಶ್ವರ: ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಬಿಸಿಲ ಧಗೆ ಏರತೊಡಗಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಋತು ಇರಲಿದ್ದು, ಆರಂಭದಲ್ಲೇ ತಾಪಮಾನ ನಿರೀಕ್ಷೆಗೂ ಮೀರಿ ಹೆಚ್ಚಿದೆ. ಸುಡುವ ಬಿಸಿಲು ಜನರಿಗೆ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೂ ಕಾಡತೊಡಗಿದೆ. ಈ ಹಿನ್ನೆಲೆ ಭುವನೇಶ್ವರದ ನಂದನ್‌ಕನನ್ ಝೂಲಾಜಿಕಲ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭವಾಗಿದೆ.

ನಂದನ್‌ಕನನ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭ

ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಅಧಿಕಾರಿಗಳು ಬೇಸಿಗೆ ನಿರ್ವಹಣೆಯನ್ನು ಪ್ರಾರಂಭಿಸಿದ್ದಾರೆ. ಪ್ರಾಣಿಗಳ ಸುರಕ್ಷತೆಗೆ ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸುಡು ಬಿಸಿಲು, ಬಿಸಿಗಾಳಿಯಿಂದ ಪ್ರಾಣಿಗಳನ್ನು ರಕ್ಷಿಸಲು ವಿಶೇಷ ಬೇಸಿಗೆ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಂದನ್‌ಕನನ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭ

ಇದನ್ನೂ ಓದಿ:ಪೊಲೀಸ್​ ಬ್ಯಾಂಡ್​ನಲ್ಲಿ ಸಖತ್​ ಆಗಿ ಮೂಡಿ ಬಂದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು!

ಪ್ರಾಣಿಗಳ ಆವರಣಕ್ಕೆ (ಗೋಡೆ, ಮೇಲ್ಛಾವಣಿ) ಬಿದಿರಿನ ಹೊದಿಕೆಗಳನ್ನು ಜೋಡಿಸಲಾಗಿದೆ. ತಂಪು ವಾತಾವರಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಾನುವಾರುಗಳಿಗೆ ಹೆಚ್ಚಿನ ನೀರು ಸಂಗ್ರಹಿಸಿಡಲಾಗುತ್ತಿದೆ. ಹೀಗೆ ನಂದನ್‌ಕನನ್ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ರಕ್ಷಣೆ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details