ಲಖಿಸರಾಯ್, ಬಿಹಾರ್: ಜಿಲ್ಲೆಯ ಬರ್ಹಿಯಾ ನಿವಾಸಿ ಸುಮನ್ ಕುಮಾರ್ ಅವರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಆಗಿದೆ. ಕೋಟಕ್ ಸೆಕ್ಯುರಿಟೀಸ್ ಮಹೀಂದ್ರಾ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಸುಮನ್ ಕುಮಾರ್ ಅವರ ಖಾತೆಗೆ 6,833ಕೋಟಿಗೂ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ. ಈ ಮೊತ್ತವನ್ನು 4 ರಿಂದ 7 ದಿನಗಳ ಹಿಂದೆ ಜಮಾ ಮಾಡಲಾಗಿದ್ದು, ಏಕಾಏಕಿ ಸುಮನ್ ಅಕೌಂಟ್ ಅಪ್ಡೇಟ್ ಮಾಡಿದಾಗ ಈ ಬಗ್ಗೆ ಮಾಹಿತಿ ಸಿಕ್ಕಿದೆ.
ಖಾತೆಗೆ ಇಷ್ಟು ದೊಡ್ಡ ಮೊತ್ತ ಬಂದಿರುವುದಕ್ಕೆ ಖುದ್ದು ಖಾತೆದಾರ ಸುಮನ್ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೂರ್ಯಗಢ ಎಸ್‌ಎಚ್‌ಒ ಚಂದನ್ ಕುಮಾರ್ ಫೋನ್‌ನಲ್ಲಿ ಮಾತನಾಡಿ, ನಮಗೆ ಒಬ್ಬ ವ್ಯಕ್ತಿಯ ಪರವಾಗಿ ಪಾಟ್ನಾದಿಂದ ಮಾಹಿತಿ ಬಂದಿದೆ. ಆದರೆ, ಈ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಬ್ಯಾಂಕ್ ಅಥವಾ ಅಧಿಕೃತವಾಗಿ ಮಾಹಿತಿ ಲಭ್ಯವಾದರೆ ನಾವು ಈ ಬಗ್ಗೆ ಏನಾದರೂ ಹೇಳಬಹುದು ಎಂದು ಹೇಳಿದರು.
ಡಿಮ್ಯಾಟ್ ಖಾತೆಯಲ್ಲಿ ಹಣ ಜಮಾ: ಕೋಟಕ್ ಸೆಕ್ಯುರಿಟೀಸ್ ಮಹೀಂದ್ರಾ ಬ್ಯಾಂಕ್ ಪಾಟ್ನಾ ಶಾಖೆಯಲ್ಲಿ ಸುಮನ್ ಕುಮಾರ್ ಡಿಮ್ಯಾಟ್ ಖಾತೆ ಹೊಂದಿದ್ದಾರೆ. ಅವರು ಷೇರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾತೆಯಲ್ಲಿ ಹಣ ಯಾರಿಂದ ಜಮಾ ಆಗಿದೆ.. 6-7 ದಿನ ಕಳೆದರೂ ಖಾತೆಯಲ್ಲಿ ಹಣ ಬಿದ್ದಿದೆ. ಇಷ್ಟು ದೊಡ್ಡ ಮೊತ್ತ ಬ್ಯಾಂಕ್‌ಗೆ ಹೇಗೆ ಮತ್ತು ಎಲ್ಲಿಂದ ಬಂತು ಎಂಬುದು ತನಿಖೆಯಾಗಬೇಕಿದೆ.
ಮೊಬೈಲ್ನಿಂದ ಸುಮನ್ ಟ್ರೇಡಿಂಗ್ ಕೆಲಸ ಮಾಡ್ತಾರೆ. ಇತ್ತಿಚೇಗೆ ಸುಮನ್ ಅಕೌಂಟ್ಗೆ ತುಂಬಾ ಹಣ ಬಂದಿರುವುದು ಗೊತ್ತಾಗಿದೆ. ಆಮೇಲೆ ಅವರು ಹಲವರನ್ನು ಸಂಪರ್ಕಿಸಿದರು. ಈ ಬಗ್ಗೆ ಕಸ್ಟಮರ್ ಕೇರ್ಗೂ ವಿಚಾರಿಸಲಾಯಿತು. ಹಣ ಬಂದಿರುವುದರ ಬಗ್ಗೆ ಖಾತ್ರಿ ಪಡೆಸಿದರು. ಈ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಕೇಳಲಾಗಿದೆ. ಆದರೆ ಈವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಸುಮನ್ ಕುಟುಂಬ ಸದಸ್ಯ ಶ್ರವಣ್ ಕುಮಾರ್ ಹೇಳಿದ್ದಾರೆ.
ಓದಿ:ಈ ಭಿಕ್ಷುಕ ಕೋಟ್ಯಧಿಪತಿಯಂತೆ.. ಹಾಗಾದ್ರೆ ಭಿಕ್ಷೆ ಬೇಡಿದ್ಯಾಕೆ?