ಕರ್ನಾಟಕ

karnataka

ETV Bharat / bharat

ಚಂಡೀಗಢದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ: ಕಾಂಗ್ರೆಸ್​- ಏಕ್ತಾ ವಿಲೀನ..! - ರಾಹುಲ್ ಗಾಂಧಿ ಭೇಟಿ ಮಾಡಿದ ಏಕ್ತಾ ಶಾಸಕರು

ಏಕ್ತಾ ಪಕ್ಷದ ಶಾಸಕರಾದ ಸುಖ್ಪಾಲ್ ಸಿಂಗ್​ ಖೈರಾ, ಜಗದೇವ್ ಸಿಂಗ್ ಮತ್ತು ಪಿರ್ಮಲ್​ ಸಿಂಗ್​​​​​ ರಾಹುಲ್ ​ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​​​ ಜತೆ ತಮ್ಮ ಏಕ್ತಾ ಪಕ್ಷವನ್ನು ವಿಲೀನಗೊಳಿಸಿರುವುದಾಗಿ ಘೋಷಿಸಿದ್ದಾರೆ.

Rahul gandhi
ರಾಹುಲ್ ಗಾಂಧಿ

By

Published : Jun 17, 2021, 3:27 PM IST

ಚಂಡಿಗಢ : ಪಂಜಾಬ್​ನಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಇಂದು ದೆಹಲಿಯಲ್ಲಿ ಏಕ್ತಾ ಪಕ್ಷದ ಶಾಸಕರಾದ ಸುಖ್ಪಾಲ್ ಸಿಂಗ್​ ಖೈರಾ, ಜಗದೇವ್ ಸಿಂಗ್ ಮತ್ತು ಪಿರ್ಮಲ್​ ಸಿಂಗ್​​​​​ ರಾಹುಲ್​ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​​​ ಜತೆ ತಮ್ಮ ಏಕ್ತಾ ಪಕ್ಷವನ್ನು ವಿಲೀನಗೊಳಿಸಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ:ಪಂಜಾಬ್​ ಸರ್ಕಾರದ ವಿರುದ್ಧ ಸಿಡಿದೆದ್ದ ವಿಪಕ್ಷಗಳು.. SAD ಅಧ್ಯಕ್ಷ ಸುಖ್ಬೀರ್​​ ವಶಕ್ಕೆ ಪಡೆದ ಪೊಲೀಸರು

ಕಳೆದೊಂದು ವಾರದಿಂದ ಪಂಜಾಬ್​ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಶಿರೋಮಣಿ ಅಕಾಲಿ ದಳದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೋವಿಡ್‌ ರೋಗಿಗಳಿಗೆ ನೀಡುವ ವೈದ್ಯಕೀಯ ಕಿಟ್‌ ಸಂಗ್ರಹ ಮತ್ತು ಲಸಿಕೆ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದಾಗಿ ಎಸ್‌ಎಡಿ ಮುಖ್ಯಸ್ಥ ಸುಖ್ಬೀರ್‌ ಸಿಂಗ್‌ ಆರೋಪಿಸಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಈ ಮಧ್ಯೆ ಇಂಥ ಬೆಳವಣಿಗೆ ನಡೆದಿರೋದು ಕಾಂಗ್ರೆಸ್​ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ABOUT THE AUTHOR

...view details