ನವದೆಹಲಿ:200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕಾನ್ ಮ್ಯಾನ್ ಸುಕೇಶ್ ಚಂದ್ರಶೇಖರ್ ತಮ್ಮ ಮಾಜಿ ಪ್ರೇಯಸಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಪತ್ರವೊಂದನ್ನು ಬರೆದು ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಪತ್ರದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಸುಕೇಶ್ ಹಬ್ಬದ ಸಂದರ್ಭದಲ್ಲಿ ತಮ್ಮ ಮಾಜಿ ಪ್ರೇಯಸಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಪತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಉದ್ದೇಶಿಸಿ ಮಾತ್ರವಲ್ಲದೇ ಮಾಧ್ಯಮಗಳನ್ನು ಉದ್ದೇಶಿಸಿಯೂ ಕೆಲವೊಂದು ಸಾಲುಗಳನ್ನು ಬರೆದಿದ್ದಾರೆ. ತಮ್ಮ ಪರವಾದ ಆವೃತ್ತಿಯನ್ನೂ ಬಿತ್ತರಿಸಿರುವ ಮಾಧ್ಯಮಗಳಿಗೆ ಧನ್ಯವಾದಗಳನ್ನು ಹೇಳಿರುವ ಸುಖೇಶ್, ತಮ್ಮ ಕುಟುಂಬ, ಸ್ನೇಹಿತರು, ಬೆಂಬಲಿಗರು ಮತ್ತು ದ್ವೇಷಿಗಳು ಮತ್ತು ಕಾನೂನು ತಂಡಕ್ಕೆ ಹೋಳಿ ಹಬ್ಬದ ಶುಭಾಶಯಗಳನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಜಾಕ್ವೆಲಿನ್ ಅನ್ನು 'ಅತ್ಯಂತ ಅದ್ಭುತ ವ್ಯಕ್ತಿ' ಎಂದು ಉಲ್ಲೇಖಿಸಿರುವ ಸುಕೇಶ್, ಅದ್ಭುತ ಹಾಗೂ ನನ್ನ ಎಂದೆಂದಿಗೂ ಸುಂದರಿಯಾಗಿರುವ ಜಾಕ್ವೆಲಿನ್‌ಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಬಣ್ಣಗಳ ಹಬ್ಬದ ಈ ದಿನದಂದು, ನಿನ್ನ ಜೀವನದಲ್ಲಿ ಕಣ್ಮರೆಯಾ ಬಣ್ಣಗಳು ಶೇ ನೂರರಷ್ಟು ಮತ್ತೆ ನಿನ್ನ ಜೀವನವನ್ನು ತುಂಬಲಿ. ಈ ವರ್ಷವಿಡೀ ನಿನ್ನ ಜೀವನ ಹೊಳಪಿನಿಂದ ಕೂಡಿರಲಿ ಮೈ ಸ್ಟೈಲ್. ಅವುಗಳನ್ನು ನಿನ್ನ ಜೀವನದಲ್ಲಿ ಮತ್ತೆ ತರುವುದು ನನ್ನ ಜವಾಬ್ದಾರಿ ಎನ್ನುವ ಆಶ್ವಾಸನೆಯನ್ನು ಕೊಡುತ್ತೇನೆ' ಎಂದು ಪತ್ರದಲ್ಲಿ ಬರೆಯಲಾಗಿದೆ.