ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತಿದೊಡ್ಡ ಅಪಘಾತಗಳಲ್ಲಿ ಒಂದಾದ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೆರವಾಗಲು ಬಹುಕೋಟಿ ರೂಪಾಯಿ ವಂಚಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಮುಂದೆ ಬಂದಿದ್ದಾನೆ. ದುರಂತದಲ್ಲಿ ಮೃತಪಟ್ಟವರ ಮಕ್ಕಳು ಭವಿಷ್ಯಕ್ಕಾಗಿ ದೇಣಿಗೆಯಾಗಿ 10 ಕೋಟಿ ರೂಪಾಯಿ ನೀಡಲು ಬಯಸಿದ್ದು, ಇದನ್ನು ಸ್ವೀಕರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜೈಲಿನಿಂದಲೇ ಶುಕ್ರವಾರ ಪತ್ರ ಬರೆದಿದ್ದಾನೆ.
ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ಅಪಘಾತದಲ್ಲಿ ಇದುವರೆಗೆ 288 ಮಂದಿ ಮೃತಪಟ್ಟಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಸಂತ್ರಸ್ತರಿಗೆ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಹಾಗೂ ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದ ಸರ್ಕಾರಗಳು ತಮ್ಮ ರಾಜ್ಯಗಳ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿವೆ. ಅಲ್ಲದೇ, ಖ್ಯಾತ ಉದ್ಯಮಿ ಗೌತಮ್ ಅದಾನಿ ಹಾಗೂ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಸಂತ್ರಸ್ತರ ಮಕ್ಕಳಿಗೆ ಸಹಾಯಹಸ್ತ ಚಾಚುವುದಾಗಿ ಪ್ರಕಟಿಸಿದ್ದಾರೆ. ಇದೀಗ ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪವನ್ನು ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಸಹ ಸಂತ್ರಸ್ತರ ಕುಟುಂಬಸ್ಥರಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದಾನೆ.
ರೈಲ್ವೆ ಸಚಿವರಿಗೆ ಸುಕೇಶ್ ಚಂದ್ರಶೇಖರ್ ಪರ ವಕೀಲರು ಬರೆದ ಪತ್ರ ಇದನ್ನೂ ಓದಿ:Odisha train tragedy: ಇನ್ನೂ ಸಿಗದ 81 ಶವಗಳ ಗುರುತು, ಸಿಬಿಐನಿಂದ ಮೂವರು ರೈಲ್ವೆ ನೌಕರರ ವಿಚಾರಣೆ
ಈ ಬಗ್ಗೆ ಸದ್ಯ ತಾನಿರುವ ಮಂಡೋಲಿ ಜೈಲಿನಿಂದಲೇ ಪತ್ರ ಬರೆದಿದ್ದು, "ಹೇಳಲಾದ ದೇಣಿಗೆಯು ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಅದು ನನ್ನ ಕಾನೂನುಬದ್ಧ ಗಳಿಕೆಯ ಮೂಲದಿಂದ ಬಂದಿದೆ, ಅದು ಸಂಪೂರ್ಣವಾಗಿ ತೆರಿಗೆಯಾಗಿದೆ. ರಿಟರ್ನ್ಸ್ ಫೈಲಿಂಗ್‌ಗಳ ಜೊತೆಗೆ ದಾಖಲೆಗಳನ್ನು 10 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಮಾಡಲು ಅನುಮತಿಸಬೇಕೆಂದು ಕೇಳಿಕೊಂಡಿದ್ದಾನೆ.
ನಮ್ಮ ಸರ್ಕಾರವು ಈಗಾಗಲೇ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲವನ್ನು ಒದಗಿಸುತ್ತಿದೆ. ನಾನು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕನಾಗಿ ಈ ನಿಧಿಗೆ 10 ಕೋಟಿ ರೂ. ಕೊಡಲು ಬಯಸಿದ್ದೇನೆ. ಈ ಹಣವನ್ನು ಸಂತ್ರಸ್ತ ಕುಟುಂಬಗಳು ಹಾಗೂ ಭವಿಷ್ಯದ ಯುವಕರಾದ ಮಕ್ಕಳ ಶಿಕ್ಷಣದ ವೆಚ್ಚಗಳಿಗಾಗಿ ವಿಶೇಷವಾಗಿ ಬಳಸಬೇಕು. ಮೃತರ ಪ್ರತಿ ಮಗುವಿನ ಶಾಲೆ, ಪ್ರೌಢಶಾಲೆ, ಕಾಲೇಜು ಶಿಕ್ಷಣ ವೆಚ್ಚಗಳಿಗೆ ನಿರ್ದಿಷ್ಟವಾಗಿ ಬಳಸಬೇಕಾದ ದೇಣಿಗೆ ಇದಾಗಿದೆ ಎಂದು ಹೇಳಿದ್ದಾನೆ.
ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಪ್ರತಿ ದಿನ ನನ್ನ ಸಂಸ್ಥೆಯಾದ ಶಾರದಾ ಫೌಂಡೇಶನ್, ಚಂದ್ರಶೇಖರ್ ಕ್ಯಾನ್ಸರ್ ಫೌಂಡೇಶನ್, ಎಲ್ಎಸ್ ಶಿಕ್ಷಣ ಸಂಸ್ಥೆಯು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮುಖ್ಯವಾಗಿ ಆಹಾರದ ಕೊಡುಗೆಗಾಗಿ ನಿರ್ಗತಿಕರಿಗೆ ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೊಡುಗೆ ನೀಡುತ್ತಿದೆ. ಸರ್ ನಾನು ವಿನಮ್ರವಾಗಿ ಉಲ್ಲೇಖಿಸಿರುವಂತೆ ಈ ಉದ್ದೇಶಕ್ಕಾಗಿ ಕೊಡುಗೆಯನ್ನು ಸ್ವೀಕರಿಸಲು ವಿನಂತಿಸುತ್ತೇನೆ. ಬೇಡಿಕೆಯ ಕರಡನ್ನು ತಕ್ಷಣವೇ ಸಿದ್ಧಪಡಿಸಬೇಕೆಂದು ಸುಕೇಶ್ ಮನವಿ ಮಾಡಿದ್ದಾನೆ.
ಇದನ್ನೂ ಓದಿ:ಒಡಿಶಾ ರೈಲು ದುರಂತ.. ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಗೌತಮ್ ಅದಾನಿ