ಕರ್ನಾಟಕ

karnataka

ETV Bharat / bharat

ಜೈಲಿನಿಂದಲೇ ಬೆದರಿಕೆ ಸಂದೇಶ: ಜಾಕ್ವೆಲಿನ್​ ಆರೋಪಕ್ಕೆ ಉತ್ತರ ನೀಡಿದ ಸುಕೇಶ್​ ಚಂದ್ರಶೇಖರ್​ - ಅಕ್ರಮ ಹಣ ವರ್ಗಾವಣೆ ಪ್ರಕರಣ ಸುಕೇಶ್​​

ಜೈಲಿನಲ್ಲಿದ್ದಕೊಂಡೇ ನಟಿ ಜಾಕ್ವೆಲಿನ್​ಗೆ ಹಲವು ಪ್ರೇಮ ಪತ್ರ ಬರೆದ ಸುಕೇಶ್​ ಚಂದ್ರಶೇಖರ್​ ಇದೀಗ ಆಕೆಯ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾನೆ

sukesh-chandrashekhar-reply-to-jacqueline-fernandez-over-whatsapp-message-threat
sukesh-chandrashekhar-reply-to-jacqueline-fernandez-over-whatsapp-message-threat

By ETV Bharat Karnataka Team

Published : Dec 27, 2023, 2:02 PM IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​ ಜೈಲಿನಲ್ಲಿರುವ ಸುಕೇಶ್​ ಚಂದ್ರಶೇಖರ್​​​ ಆಗ್ಗಿಂದಾಗಲೇ ಬಂಧಿಖಾನೆಯಿಂದಲೇ ಮಾಧ್ಯಮಗಳಿಗೆ ಪತ್ರವನ್ನು ಬರೆಯುವ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. ಈ ಬಾರಿ ಕೂಡ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಬರೆದ ಪತ್ರ ಸುದ್ದಿಯಾಗಿದೆ. ಈ ಪತ್ರದಲ್ಲಿ ಸುಕೇಶ್​​​, ಬಾಲಿವುಡ್​ ಬೆಡಗಿ ಜಾಕ್ವೇಲಿನ್​ ಆರೋಪವನ್ನು ತಳ್ಳಿ ಹಾಕಿ ಸ್ಪಷ್ಟಿಕರಣ ನೀಡಿದ್ದಾರೆ.

ಸುಕೇಶ್​ ಬರೆದ ಪತ್ರ

ಏನಿದು ಪ್ರಕರಣ?:ಸುಕೇಶ್​ ಮತ್ತು ಜಾಕ್ವೆಲಿನ್​ ನಡುವೆ ಸಂಬಂಧ ಕುರಿತು ಈಗಾಗಲೇ ಅನೇಕ ವರದಿಗಳಾಗಿವೆ. ಇದೀಗ ಜೈಲಿನಲ್ಲಿರುವ ಸುಕೇಶ್​ ತಮಗೆ ಅಲ್ಲಿಂದಲೇ ಬೆದರಿಕೆ ಸಂದೇಶವನ್ನು ವಾಟ್ಸ್​​ಆ್ಯಪ್​​ ಮೂಲಕ ಕಳುಹಿಸಿದ್ದಾರೆ ಎಂದು ನಟಿ ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಲ್ಲಿರುವ ಸುಕೇಶ್​ ವಾಟ್ಸ್​ಆ್ಯಪ್​ ​ ಮತ್ತು ವಾಯ್ಸ್​ ಮೇಸೆಜ್​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಳು.

ಈ ಕುರಿತು ಸ್ಪಷ್ಟೀಕರಣಕ್ಕೆ ಪತ್ರ ಬರೆದಿರುವ ಸುಕೇಶ್​​, ನಾನು ಈ ರೀತಿ ತಪ್ಪು ಮಾಡಿದರೆ, ಸಿಬಿಐ ತನಿಖೆ ನಡೆಸಲಿದೆ. ಈ ತನಿಖೆ ವೇಳೆ ನಾನು ಏನಾದರೂ ತಪ್ಪು ಮಾಡಿದ್ದೇನೆ ಎಂದು ಬಯಲಾದರೆ, ಏನು ಬೇಕಾದರೂ ಶಿಕ್ಷೆ ನೀಡಲಿ ಎಂದಿದ್ದಾರೆ. ಅಷ್ಟೇ ಅಲ್ಲದೇ, ಈ ರೀತಿ ಸಂದೇಶ ಕಳುಹಿಸಿದ ಐಪಿ ಅಡ್ರೆಸ್​​ ಮತ್ತು ಐಎಂಇಐ ನಂಬರ್​ ಅನ್ನು ಪ್ರಶ್ನಿಸಲಿ, ಆಗ ಯಾರ ಸಂಖ್ಯೆ ಅದು ಎಂಬುದು ಸುಲಭವಾಗಿ ಪತ್ತೆ ಆಗುತ್ತದೆ ಎಂದಿದ್ದಾರೆ.

ಜಾಕ್ವೇಲಿನ್​ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಬೆದರಿಕೆ ಸಂದೇಶದ ಆರೋಪವನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮುಂದೆ ಮಾಡುತ್ತಿದ್ದಾರೆ. ಜೈಲಿನಿಂದ ಸಂದೇಶ ಕಳುಹಿಸುವ ಯೋಚನೆ ಸಂಪೂರ್ಣವಾಗಿ ತಪ್ಪು. ಈ ಸಂಬಂಧ ಬೇಕಾದಲ್ಲಿ ಸಂಪೂರ್ಣ ಕಾನೂನು ತನಿಖೆಗೆ ಅರ್ಜಿ ಹಾಕಲಿ. ಜಾಕ್ವೆಲಿನ್​ ತಾನೊಬ್ಬಳು ಸಂತ್ರಸ್ತೆ ಎಂದು ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದ್ದಾಳೆ. ಈ ಹಿನ್ನೆಲೆ ಕೋರ್ಟ್​ ಮುಂದೆ ತಾನು ಸರಿ ಎಂದು ಸಾಬೀತು ಮಾಡಲು ಈ ರೀತಿ ಮಾಡುತ್ತಿದ್ದಾಳೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಪಿತೂರಿನಲ್ಲಿ ನನ್ನನ್ನೂ ನೀನು ಎಷ್ಟೇ ದೂಷಿಸಿ, ಅದರಲ್ಲಿ ನನ್ನ ಪಾತ್ರ ಇರುವಂತೆ ಮಾಡಿದರೂ. ನಾನು ನಿಮ್ಮನ್ನು ಹುಚ್ಚನಂತೆ ಪ್ರೀತಿಸುತ್ತೇನೆ. ನೀನೇ ನನ್ನ ಜಗತ್ತು ಎಂದಿದ್ದು, ಜಾಕ್ಷೆಲಿನ್​ಗೆ ಮುಖ್ಯವಾಗಿ ಹೊಸ ವರ್ಷದ ಶುಭಾಶಯ ಕೋರಿದ್ದಾನೆ. ಸುಕೇಶ್​ ಚಂದ್ರಶೇಖರ್​ ಈ ರೀತಿ ಪತ್ರ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಸೂಚನೆ ನೀಡುವಂತೆ ದೆಹಲಿ ಹೈಕೋರ್ಟ್​​ಗೆ ಜಾಕ್ವೆಲಿನ್​ ಮನವಿ ಮಾಡಿದ್ದಳು. ಜೈಲಿನಿಂದ ಸುಕೇಶ್​ ಚಂದ್ರ ಬಿಡುಗಡೆ ಮಾಡುವ ಪತ್ರಗಳು ತಮ್ಮನ್ನು ತೇಜೋವಧೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲದಕ್ಕೂ ತಡೆ ನೀಡಬೇಕು ಎಂದು ಕೋರಿದ್ದಾಳೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಹೆಸರು ಕೈಬಿಡುವಂತೆ ಕೋರ್ಟ್​ ಮೆಟ್ಟಿಲೇರಿದ ಜಾಕ್ವೆಲಿನ್

ABOUT THE AUTHOR

...view details