ಕರ್ನಾಟಕ

karnataka

ETV Bharat / bharat

ಅಯೋಧ್ಯಾ ರಾಮನಿಗೆ ವಜ್ರ ಖಚಿತ ಚಿನ್ನದ ಮುಕುಟ ಕಾಣಿಕೆ ನೀಡಲು ಮುಂದಾದ ಸುಕೇಶ್​ ಚಂದ್ರಶೇಖರ್ - ಈಟಿವಿ ಭಾರತ ಕನ್ನಡ

Sukesh wishes to donate gold crown for Ayodhya Srirama: ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಚಿನ್ನದ ಕಿರೀಟ ನೀಡಲು ಬಯಸುತ್ತಿರುವುದಾಗಿ ಸುಕೇಶ್​ ಚಂದ್ರಶೇಖರ್​ ಜೈಲಿನಿಂದಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

Sukesh Chandrashekar wishes to donate gold crown for ayodhya shrirama
ಅಯೋಧ್ಯೆ ರಾಮನಿಗೆ ವಜ್ರ ಖಚಿತ ಚಿನ್ನದ ಮುಕುಟ ಕಾಣಿಕೆ ನೀಡಲು ಮುಂದಾದ ಸುಕೇಶ್​ ಚಂದ್ರಶೇಖರ್

By ETV Bharat Karnataka Team

Published : Nov 4, 2023, 6:49 PM IST

ನವದೆಹಲಿ:ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ. ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಚಿನ್ನದ ಕಿರೀಟ ನೀಡಲು ಬಯಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಪ್ರಕಾರ, 916.24 ಕ್ಯಾರೆಟ್​ ಚಿನ್ನದಿಂದ ಮಾಡಲ್ಪಟ್ಟ, ಸುಮಾರು 11 ಕಿ.ಗ್ರಾಂ ತೂಕವಿರುವ ಕಿರೀಟವನ್ನು ಸುಕೇಶ್​ ಚಂದ್ರಶೇಖರ್​ ಅಯೋಧ್ಯೆಗೆ ನೀಡಲಿದ್ದಾರೆ. ಕಿರೀಟವು 101 ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ. ಒಂದೊಂದು ವಜ್ರವು 5 ಕ್ಯಾರೆಟ್​ ತೂಕವಿದೆ. ಅಲ್ಲದೇ, ಕಿರೀಟದ ಮಧ್ಯ ಭಾಗದಲ್ಲಿ ಇರುವ ಡೈಮಾಂಡ್​ 50 ಕ್ಯಾರೆಟ್​ ಗಾತ್ರದ್ದಾಗಿದೆ.

ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ವ್ಯಾಪಾರಿಗಳ ತಜ್ಞರ ಮಾರ್ಗದರ್ಶನದಲ್ಲಿ ಕಿರೀಟವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ಕಿರೀಟವನ್ನು ತಯಾರಿಸುವವರು, 1900ರ ಇಸವಿಯಿಂದ ಆಭರಣ ಕರಕುಶಲತೆಯಲ್ಲಿ ಅವರ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ. ಭಗವಾನ್​ ಬಾಲಾಜಿ ತಿರುಮಲ ದೇವಸ್ಥಾನ ಸೇರಿದಂತೆ ವಿವಿಧ ಪವಿತ್ರ ದೇವಾಲಯಗಳಿಗೆ ಇವರೇ ಆಭರಣಗಳನ್ನು ರಚಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಬೇಬಿ ನಿನಗಿಂತ ಸುಂದರವಾಗಿರುವವರು ಯಾರೂ ಇಲ್ಲ, ನನ್ನ ಬೊಮ್ಮಾ.. ನಟಿ ಜಾಕ್ವೆಲಿನ್​ಗೆ ಜೈಲಿನಿಂದಲೇ ಮತ್ತೆ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್

ಚಂದ್ರಶೇಖರ್​ ಮತ್ತು ಅವರ ಕುಟುಂಬಕ್ಕೆ ಶ್ರೀರಾಮನ ಮೇಲಿನ ಅಚಲ ಭಕ್ತಿಯೇ ಈ ಭವ್ಯವಾದ ಕಾಣಿಕೆ ನೀಡಲು ಪ್ರೇರೇಪಿಸಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಕಿರೀಟವನ್ನು ಅರ್ಪಿಸುವ ಅವಕಾಶ ಸಿಕ್ಕಿದ್ದು, ನನ್ನದೊಂದು ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಅವರ ಜೀವನದಲ್ಲಿ ಎಲ್ಲವೂ ಶ್ರೀರಾಮನ ಆಶೀರ್ವಾದದ ಪರಿಣಾಮವಾಗಿದೆ. ಕಿರೀಟವನ್ನು ಶ್ರೀರಾಮನಿಗೆ ನೀಡುವುದು ಅವರಿಗೆ ಮತ್ತು ಕುಟುಂಬಕ್ಕೆ ಮಹತ್ವದ ಮೈಲಿಗಲ್ಲು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸುಕೇಶ್​ ಚಂದ್ರಶೇಖರ್​ ಜೈಲಿನಲ್ಲಿ ಇರುವ ಕಾರಣ ಈ ಕಿರೀಟದ ಅಧಿಕಾರವನ್ನು ಅವರ ಕಾನೂನು ಸಲಹೆಗಾರ ಅನಂತ್​ ಮಲಿಕ್​ ಅವರಿಗೆ ನೀಡಿದ್ದಾರೆ. ಅವರು ಚಿನ್ನದ ಕಿರೀಟವನ್ನು ಟ್ರಸ್ಟ್​ಗೆ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಕಿರೀಟಕ್ಕೆ ಸಂಬಂಧಿಸಿದ ಅಗತ್ಯ ಬಿಲ್​ಗಳು, ರಶೀದಿಗಳು ಮತ್ತು ಪ್ರಮಾಣ ಪತ್ರಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಪೂರೈಸಲಾಗಿದೆಯೇ ಎಂದು ಅನಂತ್​ ಮಲಿಕ್​ ಅವರು ಖಚಿತಪಡಿಸಿಕೊಳ್ಳುತ್ತಾರೆ. ಡಿಸೆಂಬರ್​ ಮೊದಲ ವಾರದ ವೇಳೆಗೆ ಚಿನ್ನದ ಕಿರೀಟ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಇದಕ್ಕೂ ಮುನ್ನ ಸುಕೇಶ್​ ಚಂದ್ರಶೇಖರ್​ ಜೈಲಿನಿಂದಲೇ ಹಲವು ವಿಚಾರವಾಗಿ ಪತ್ರಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:Sukesh Chandrashekar: ರೈಲು ದುರಂತ ಸಂತ್ರಸ್ತರಿಗೆ ₹10 ಕೋಟಿ ಕೊಡುವೆ, ಸ್ವೀಕರಿಸಿ; ಜೈಲಿನಿಂದಲೇ ಸರ್ಕಾರಕ್ಕೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್‌!

ABOUT THE AUTHOR

...view details