ಕರ್ನಾಟಕ

karnataka

ETV Bharat / bharat

20 ಮಿಲಿಯನ್ ಡಾಲರ್ ರೂಪಾಯಿಗೆ ಪರಿವರ್ತನೆ : ಸತ್ಯೇಂದ್ರ ಜೈನ್​ ವಿರುದ್ಧ ಗಂಭೀರ ಆರೋಪ ಮಾಡಿದ ಸುಕೇಶ್ ಚಂದ್ರಶೇಖರ್

20 ಮಿಲಿಯನ್ ಡಾಲರ್​ನ್ನು ರೂಪಾಯಿಗೆ ಪರಿವರ್ತನೆ ಮಾಡುವಂತೆ ಸತ್ಯೇಂದ್ರ ಜೈನ್​ ಕೇಳಿದ್ದರು ಎಂದು ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

sukesh-chandrasekhar-allegation-satyendar-jain-got-20-million-dollars-converted-into-rupees
ಸತ್ಯೇಂದ್ರ ಜೈನ್​ ವಿರುದ್ಧ ಗಂಭೀರ ಆರೋಪ ಮಾಡಿದ ಸುಖೇಶ್ ಚಂದ್ರಶೇಖರ್

By

Published : Nov 19, 2022, 7:44 PM IST

ನವದೆಹಲಿ : ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಮತ್ತೆ ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಸಂಜೆ ತಮ್ಮ ವಕೀಲ ಅಶೋಕ್ ಸಿಂಗ್ ಮೂಲಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ, ಸುಕೇಶ್ ಅವರು ಎಎಪಿ ನಾಯಕರು ಮತ್ತು ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರಲ್ಲಿ, ಸತ್ಯೇಂದ್ರ ಜೈನ್ ಫೆಬ್ರವರಿ 2017 ರಲ್ಲಿ ನನಗೆ ಕರೆ ಮಾಡಿ 20 ಮಿಲಿಯನ್ ಡಾಲರ್​​ನ್ನು ರೂಪಾಯಿಗೆ ಪರಿವರ್ತಿಸುವಂತೆ ಸಹಾಯ ಕೇಳಿದ್ದರು ಎಂದು ಆರೋಪಿಸಿದ್ದಾರೆ.

ಸತ್ಯೇಂದ್ರ ಜೈನ್ ಅವರ ಪರಿಚಯಸ್ಥರೊಬ್ಬರು ಬೆಂಗಳೂರಿನ ಪ್ರಸಿದ್ಧ ಡಿಸ್ಟಿಲರಿ ಕಂಪನಿಯ ಮಾಲೀಕರಿಂದ ಡಾಲರ್​​ಗಳನ್ನು ಪಡೆದುಕೊಳ್ಳುವಂತೆ ನಮಗೆ ಹೇಳಿದ್ದರು. ಜೊತೆಗೆ ಡಾಲರ್ ಪರಿವರ್ತನೆಗೆ ಬದಲಾಗಿ ಕಮಿಷನ್​ ನೀಡುವುದಾಗಿಯೂ ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಸತ್ಯೇಂದ್ರ ಜೈನ್ ಅವರ ಸುಮಾರು 30 ರಿಂದ 40 ಕರೆಗಳ ನಂತರ, ನನ್ನ ಸಿಬ್ಬಂದಿಗಳಾದ ಗೋಪಿನಾಥ್ ಮತ್ತು ರವಿ ಅವರ ಕೆಲಸವನ್ನು ಮಾಡಿದ್ದಾರೆ. ಈ ಹಣವನ್ನು ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಇನ್ನು ಇದು ಯಾರ ಹಣ ಎಂದು ಕೇಜ್ರಿವಾಲ್ ಉತ್ತರಿಸಬೇಕು ಎಂದು ಸುಕೇಶ್ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಈ 4 ಬ್ಯಾಗ್‌ಗಳನ್ನು ತಲುಪಿಸಿದ ಆಭರಣ ವ್ಯಾಪಾರಿ ಯಾರು? ಡಿಸ್ಟಿಲರಿ ಕಂಪನಿಯ ಮಾಲೀಕರು ಯಾರು? ಎಂದು ಸುಕೇಶ್ ಕೇಜ್ರಿವಾಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಸುಕೇಶ್ ಚಂದ್ರಶೇಖರ್ ಈ ಹಿಂದೆಯೂ ಆಮ್ ಆದ್ಮಿ ಪಕ್ಷದ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಕೈಲಾಶ್ ಗೆಹ್ಲೋಟ್ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಒಂದು ವೇಳೆ ನಾನು ದರೋಡೆಕೋರನಾಗಿದ್ದರೆ, ದೆಹಲಿ ಸರ್ಕಾರಿ ಶಾಲೆಗಳ ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪಿಆರ್ ವ್ಯವಸ್ಥೆ ಮಾಡಲು ನೀವು ನನ್ನನ್ನು ಏಕೆ ಕೇಳಿದ್ದೀರಿ. ಇದರೊಂದಿಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಲು 8 ಲಕ್ಷ 50 ಸಾವಿರ ಡಾಲರ್ (ಸುಮಾರು 7 ಕೋಟಿ ರೂಪಾಯಿ) ಹಾಗೂ ಶೇ 15ರಷ್ಟು ಹೆಚ್ಚುವರಿ ಕಮಿಷನ್ ನೀಡಿರುವುದಾಗಿಯೂ ಹೇಳಿಕೊಂಡಿದ್ದರು.

ಇದಕ್ಕೂ ಮುನ್ನ ಗುರುವಾರ, ದೆಹಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪೂರೈಕೆಗಾಗಿ ಚೀನಾದ ಕಂಪನಿಯೊಂದು 2016 ರಲ್ಲಿ ಲಂಚಕ್ಕೆ ಬೇಡಿಕೆಯಿಟ್ಟಿತ್ತು ಎಂದು ಸುಕೇಶ್ ಆರೋಪಿಸಿದ್ದರು. ಈ ಸಂಬಂಧ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಚೀನಾದ ಕಂಪನಿಯ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ರದಲ್ಲಿ ಹೇಳಿದ್ದರು.

ಇದನ್ನೂ ಓದಿ :ಸತ್ಯೇಂದ್ರ ಜೈನ್ ವಿಡಿಯೋ ವೈರಲ್; ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ

ABOUT THE AUTHOR

...view details