ಹೈದರಾಬಾದ್: ಇಲ್ಲಿನ ವನಸ್ಥಲಿಪುರಂನಲ್ಲಿ ಆನ್ಲೈನ್ ಗೇಮ್ಗಳನ್ನು ಆಡಿ ಎಲ್ಲ ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆನ್ಲೈನ್ ಗೇಮ್ನಿಂದ ಹಣ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು !
ನಾನು ಆನ್ಲೈನ್ ಆಟಗಳನ್ನು ಆಡಿ ನನ್ನಲ್ಲಿದ್ದ ಎಲ್ಲ ಹಣ ಆಸ್ತಿ ಕಳೆದುಕೊಂಡೆ, ನನ್ನನ್ನು ಕ್ಷಮಿಸಿ ಎಂದು ತನ್ನ ಹೆಂಡತಿಗೆ ಸೆಲ್ಫಿ ವಿಡಿಯೋ ಕಳುಹಿಸಿ ನೇಣು ಬಿಗಿದುಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣು
ಜಗದೀಶ್ ಆತ್ಮಹತ್ಯೆ ಮಾಡಿಕೊಂಡವ. ನಾನು ಆನ್ಲೈನ್ ಆಟಗಳನ್ನು ಆಡಿ ನನ್ನಲ್ಲಿದ್ದ ಎಲ್ಲಾ ಹಣ ಆಸ್ತಿ ಕಳೆದುಕೊಂಡೆ, ನನ್ನನ್ನು ಕ್ಷಮಿಸಿ ಎಂದು ತನ್ನ ಹೆಂಡತಿಗೆ ಸೆಲ್ಫಿ ವಿಡಿಯೋ ಕಳುಹಿಸಿ ನೇಣು ಬಿಗಿದುಕೊಂಡಿದ್ದಾನೆ.
ಈ ಹಿಂದೆ ಆನ್ಲೈನ್ ಆಟಗಳನ್ನು ಆಡುವ ಮೂಲಕ 12 ಲಕ್ಷ ರೂ. ಸಾಲ ತೀರಿಸಿದ್ದ ಜಗದೀಶ್, ಈಗ ಅದೇ ಆಟದಿಂದ ತನ್ನ ಜೀವನವನ್ನೇ ಕೊನೆಗಾಣಿಸಿಕೊಂಡಿದ್ದಾನೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.