ನವದೆಹಲಿ:ದೆಹಲಿಯ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ರಹಸ್ಯ ಕಾರ್ಯಾಚರಣೆ ಮಾಡಿರುವ ಬಿಜೆಪಿ, ಆಪ್ ವಿರುದ್ದ ಮದ್ಯ ಹಗರಣದ ಆರೋಪ ಮಾಡಿದೆ.
ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಹೊಸ ಅಬಕಾರಿ ನೀತಿಯಲ್ಲಿ ಆಪ್ ಪಕ್ಷ ಯಾವ ರೀತಿ ಹಗರಣ ನಡೆಸಿದೆ ಮತ್ತು ಯಾರಿಂದ ಹಣ ಪಡೆದಿದೆ ಎಂಬೆಲ್ಲಾ ಮಾಹಿತಿಗಳು ಲಭ್ಯವಾಗಿದೆ ಎಂದರು.
ಹೊಸ ಅಬಕಾರಿ ನೀತಿಯನ್ನು ಕೇವಲ ಹಗರಣಕ್ಕಾಗಿ ಸಿದ್ಧಪಡಿಸಲಾಗಿದ್ದು, ಹಗರಣಕ್ಕೆ ಮಾತ್ರ ಸಂಪೂರ್ಣ ನೀತಿ ಸಿದ್ಧವಾಗಿದೆ ಎಂದು ಆರೋಪಿಸಿದರು. ಇದೀಗಾ ಪಕ್ಷದ ಹಗರಣ ಬಯಲಿಗೆ ಬಂದಿದ್ದು, ಹಗರಣದಲ್ಲಿ ಸಿಬಿಐ ಒಂಬತ್ತನೆ ಆರೋಪಿ ಎಂದು ಹೆಸರಿಸಿರುವ ಅಮಿತ್ ಅರೋರಾ ಈ ಹಗರಣವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತಾ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೇ ಹಗರಣದ ಹಣವನ್ನು ಗೋವಾ ಮತ್ತು ಪಂಜಾಬ್ ಚುನಾವಣೆಗಳಲ್ಲಿ ಬಳಸಲಾಗಿದೆ. ಅಬಕಾರಿ ಹೊಸ ನೀತಿ ಅಡಿಯಲ್ಲಿ ಟೆಂಡರ್ ಪಡೆಯಲು ಆಪ್ ಸರ್ಕಾರ ಕನಿಷ್ಠ 5 ಕೋಟಿ ಶುಲ್ಕವನ್ನು ನಿಗದಿ ಪಡಿಸಿದ್ದು, ಸಣ್ಣ ಉದ್ಯಮಿಗಳು ಟೆಂಡರ್ನಲ್ಲಿ ಭಾಗವಹಿಸದಂತೆ ಈ ನೀತಿಯನ್ನು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ.