ಪುರಿ, ಒಡಿಶಾ:ಸ್ವಾತಂತ್ರ್ಯ ವೀರ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವಿಶ್ವ ವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿ ಮೂಲಕ ಗೌರವ ಸಲ್ಲಿಸಿದ್ದಾರೆ.
ಪುರಿ ಬೀಚ್ನಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯಾ ಗೇಟ್ ಬಳಿ ನಿರ್ಮಾಣವಾಗುತ್ತಿರುವ ನೇತಾಜಿ ಅವರ ಪ್ರತಿಮೆಯ ಮರಳು ಕಲಾಕೃತಿಯನ್ನು ರೂಪಿಸಿರುವ ಸುದರ್ಶನ್ ಪಟ್ನಾಯಕ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸುರೇಂದ್ರ ಸಾಯಿ ಅವರ ಮರಳು ಕಲಾಕೃತಿಯನ್ನೂ ಪ್ರತ್ಯೇಕವಾಗಿ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಸುದರ್ಶನ್ ಪಟ್ನಾಯಕ್ ಅವರು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಶೀಘ್ರವಾಗಿ ಸುಧಾರಿಸಲಿ ಎಂದು ಹಾರೈಸಿ ಮರಳು ಕಲಾಕೃತಿಯೊಂದನ್ನು ರಚಿಸಿದ್ದರು.
ಇದನ್ನೂ ಓದಿ:ಸ್ವಾತಂತ್ರಕ್ಕಾಗಿ ರಕ್ತ ಕೊಡಿ ಎಂದಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ರ 125ನೇ ಜನ್ಮದಿನ : ಅವರ ಬಗ್ಗೆ ನಿಮಗೆಷ್ಟು ಗೊತ್ತು!?