ಸಿಧಿ (ಮಧ್ಯಪ್ರದೇಶ): ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವತಿ ತನ್ನ ನಾಲಿಗೆಯನ್ನು ಕತ್ತರಿಸಿ ಮಾತೃದೇವತೆಯ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆ ಜನರಲ್ಲಿ ಮೂಡಿದೆ. ಇಂತಹದ್ದೊಂದು ಸಿಹಾವಾಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬರಗಾಂವ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಹಾಗೂ ವೈದ್ಯರು ಸ್ಥಳಕ್ಕೆ ದೌಡಾಯಿಸಿದರು.
ಪೂಜೆ ವೇಳೆ ನಾಲಿಗೆ ಕಟ್: ಯುವತಿ ರಾಜಕುಮಾರಿ ಪಟೇಲ್ (20 ವರ್ಷ) ತಂದೆ ಲಾಲಮಣಿ ಪಟೇಲ್ ಮತ್ತು ತನ್ನ ತಾಯಿಯೊಂದಿಗೆ ಬಾಡಾ ಗ್ರಾಮದ ಪ್ರಸಿದ್ಧ ಹನುಮಾನ್ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾದ ಮಾತೆಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ರು. ಈ ಸಮಯದಲ್ಲಿ ರಾಜಕುಮಾರಿ ತನ್ನ ನಾಲಿಗೆಯನ್ನು ಕತ್ತರಿಸಿ ಕಿಟಕಿಯ ಹೊರಗಿನಿಂದ ತಾಯಿಯ ಪಾದಗಳಿಗೆ ಎಸೆದಿದ್ದಾರೆ.
ಓದಿ:ಈ ಮಹಿಳೆಯ ನಾಲಿಗೆ ಮೇಲೆ ಕೂದಲು ಬಂದಿವೆಯಂತೆ... ಕಾರಣ ಗೊತ್ತಾದ್ರೆ ಅಚ್ಚರಿಗೊಳಗಾಗ್ತೀರ!
ಇದನ್ನು ನೋಡಿದ ಆಕೆಯ ತಾಯಿ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದಾರೆ. ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ಜಮಾಯಿಸಿದರು. ಅಮಿಲಿಯಾ ಪೊಲೀಸ್ ಠಾಣೆಯ ಅಧಿಕಾರಿ ಕೇದಾರ್ ಪರೂಹಾ ಅವರು ತಮ್ಮ ತಂಡದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಸ್ವತಂತ್ರ ಪಟೇಲ್ ದೇವಿಯನ್ನು ಕರೆದುಕೊಂಡು ದೇವಸ್ಥಾನಕ್ಕೆ ತಲುಪಿದರು.
ಯುವತಿ ಆರೋಗ್ಯ ಪರೀಕ್ಷೆ ಮಾಡಿದ ವೈದ್ಯರು: ಯುವತಿಯ ಆರೋಗ್ಯ ಪರೀಕ್ಷೆಯನ್ನು ಡಾ.ಸ್ವತಂತ್ರ ಪಟೇಲ್ ಮಾಡಿದ್ದರು. ಯಾವುದೇ ರೀತಿಯ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿ ಬೇಗ ಗುಣಮುಖಳಾಗುತ್ತಾಳೆ ಎಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದರು. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.