ರಾಜ್ಕೋಟ್(ಗುಜರಾತ್):ಧೈರ್ಯಂ ಸರ್ವತ್ರ ಸಾಧನಂ. ಇದನ್ನು ನಂಬಿದರೆ ಭಯ ಅನ್ನೋದು ನಮ್ಮ ಹತ್ತಿರವೂ ಸುಳಿಯಲ್ಲ. ಗುಜರಾತ್ನ ರಾಜ್ಕೋಟ್ನಲ್ಲಿ ನಾಯಿಯೊಂದು ಇದನ್ನ ಸಾಬೀತು ಮಾಡಿದೆ. ತನ್ನ ಎದುರಿಗಿದ್ದಿದ್ದು ಕಾಡಿನ ರಾಜ ಸಿಂಹ ಅನ್ನೋದನ್ನೂ ಲೆಕ್ಕಿಸದೇ ಶ್ವಾನವೇ ಸಿಂಹವನ್ನು ಅಟ್ಟಿಸಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಕೋಟ್ ನಗರದಿಂದ 30 ಕಿ.ಮೀ ದೂರದಲ್ಲಿರುವ ಲೋಧಿಕಾ ಪ್ರದೇಶದಲ್ಲಿ ಎರಡು ಸಿಂಹಗಳು ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿವೆ. ಇವು ಆ ಪ್ರದೇಶದ ಗ್ರಾಮಗಳಿಗೂ ಲಗ್ಗೆ ಇಡುತ್ತಿವೆ. ಹೀಗೆ ಗ್ರಾಮ ಸಮೀಪ ಬಂದಿದ್ದ ಸಿಂಹವನ್ನು ಶ್ವಾನವೊಂದು ಅಟ್ಟಿಸಿಕೊಂಡು ಹೋಗಿದೆ. ನಾಯಿಯನ್ನು ಕಂಡು ಸಿಂಹವೇ ಬಾಲ ಮುದುರಿಕೊಂಡು ಓಟಕ್ಕಿತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.