ಹೈದರಾಬಾದ್: ಮಂಗಳನ ಅಂಗಳಕ್ಕೆ ಹೊಸ ರೋವರ್ ಕಳುಹಿಸಿರುವ ನಾಸಾ, ಮಂಗಳನ ಅಂಗಳದಲ್ಲಿ ರೋವರ್ ಲ್ಯಾಂಡ್ ಆಗುತ್ತಿರುವ ಮೊದಲ ನೋಟ ಸೆರೆ ಸಿಕ್ಕಿದೆ. ಇದೀಗ ಕೆಲ ಅಚ್ಚರಿಕರ ಹಾಗೂ ಕುತೂಹಲಕಾರಿಯಾದ ಫೋಟೊಗಳನ್ನ ನಾಸಾ ರಿಲೀಸ್ ಮಾಡಿದೆ.
ನಾಸಾದಿಂದ ಮಂಗಳನ ಅಂಗಳದ ಅಚ್ಚರಿ ಮೂಡಿಸುವ ಫೋಟೋಗಳು ರಿಲೀಸ್ - ರೋವರ್ ಲ್ಯಾಂಡ್
ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್ ರೋವರ್ ಅನ್ನು ಯಶಸ್ವಿಯಾಗಿ ಇಳಿಸಿದ ನಾಸಾ, ಇದೀಗ ಕೆಲ ಅಚ್ಚರಿಕರ ಹಾಗೂ ಕುತೂಹಲಕಾರಿಯಾದ ಫೋಟೊಗಳನ್ನು ಬಿಡುಗಡೆ ಮಾಡಿದೆ.
Successful Mars exploration missions
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿರುವ ಹೊಸ ರೋವರ್, ಮಂಗಳನ ಅಂಗಳದಲ್ಲಿರುವ ಪುರಾತನ ನದಿಯೊಂದರ ದಂಡೆಯ ಮೇಲೆ ಯಶಸ್ವಿಯಾಗಿ ಇಳಿದ ನಂತರ ಈ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕದ ಈ ರೋವರ್, ಮಂಗಳ ಅಂಗಳವನ್ನು ಸಂಶೋಧಿಸಲಿದ್ದು, ಅಲ್ಲಿ ಜೀವಿಗಳ ಇರುವಿಕೆಯನ್ನು ಹುಡುಕಲಿದೆ. ಅಲ್ಲದೇ, ಜೀವ ವಿಕಾಸದ ಬಗ್ಗೆ ಅಧ್ಯಯನ ನಡೆಸಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಚೀನಾದ ಎರಡು ಬಾಹ್ಯಾಕಾಶ ನೌಕೆಗಳು ಕಳೆದ ವಾರ ಮಂಗಳನ ಸುತ್ತ ಕಕ್ಷೆಯಲ್ಲಿ ಯಶಸ್ವಿಯಾಗಿ ತಿರುಗಾಟ ನಡೆಸಿವೆ.