ಭಾರತದ ರಕ್ಷಣಾ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರ ಎರಡ ಹಡಗು ನಿರೋಧಕ ಕ್ಷಿಪಣಿಗಳನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನಲ್ಲಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.
ನೌಕಾಪಡೆಯಿಂದ ಎರಡು ಹಡಗು ನಿರೋಧಕ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ - ಅಂಡಮಾನ್ ನಿಕೋಬಾರ್ ಕಮಾಂಡ್
ಸಶಸ್ತ್ರ ಪಡೆಗಳ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನಲ್ಲಿ ಭಾರತದಲ್ಲಿ ಎರಡು ಹಡಗು ನಿರೋಧಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.
ನೌಕಾಪಡೆಯಿಂದ ಎರಡು ಹಡಗು-ನಿರೋಧಕ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ
ಭಾರತೀಯ ಸಶಸ್ತ್ರ ಪಡೆಗಳ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನಲ್ಲಿ ಬ್ರಹ್ಮೋಸ್ ಮತ್ತು ಉರಾನ್ ಹಡಗು ನಿರೋಧಕ ಕ್ಷಿಪಣಿಗಳನ್ನು ಪರೀಕ್ಷಿಸಲಾಗಿದೆ. ಬ್ರಹ್ಮೋಸ್ ಅನ್ನು ನೆಲದ ಮೇಲಿಂದ ಉಡಾವಣೆ ಮಾಡಲಾಗಿದ್ದು, ಉರಾನ್ ಕ್ಷಿಪಣಿಯನ್ನು ಗೈಡೆಡ್ ಮಿಸೈಲ್ ಕಾರ್ವೆಟ್ನಿಂದ ಉಡಾವಣೆ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ