ಕರ್ನಾಟಕ

karnataka

ಗ್ಲೋಬಲ್​ ವಾಯ್ಸ್​ ಶೃಂಗಸಭೆ ಯಶಸ್ವಿ ಮುಕ್ತಾಯ: ಭಾರತದ ಹೊಸ ಹಾದಿಗೆ ವಿಶಿಷ್ಟ ಆರಂಭ

By

Published : Jan 14, 2023, 1:09 PM IST

ಗ್ಲೋಬಲ್​ ಸೌತ್​ ವಾಯ್ಸ್​ ಶೃಂಗಸಭೆ ಅಂತ್ಯ- 125 ದೇಶಗಳು ವರ್ಚುಯಲ್​ ಆಗಿ ಭಾಗಿ- ಪ್ರಧಾನಿ ಮೋದಿ ಭಾಷಣಕ್ಕೆ ಮೆಚ್ಚುಗೆ

ಗ್ಲೋಬಲ್​ ವಾಯ್ಸ್​ ಶೃಂಗಸಭೆ ಯಶಸ್ವಿ ಮುಕ್ತಾಯ; ಭಾರತದ ಹೊಸ ಹಾದಿಗೆ ವಿಶಿಷ್ಟ ಆರಂಭ
Successful conclusion of Global Voice Summit - A unique start to a new path for India

ನವದೆಹಲಿ:ಗ್ಲೋಬಲ್ ಸೌತ್‌ನ ವಾಯ್ಸ್ ಶೃಂಗಸಭೆಯು ಒಂದು ವಿಶಿಷ್ಟ ಆರಂಭವಾಗಿದೆ. ಇದು ಗ್ಲೋಬಲ್ ಸೌತ್‌ ದೇಶಗಳ ಆದ್ಯತೆಗಳ ಹೆಚ್ಚಿನ ಸಹಯೋಗದ ಹೊಸ ಮಾರ್ಗವನ್ನು ರೂಪಿಸಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಆದ್ಯತೆಗಳು, ದೃಷ್ಟಿಕೋನಗಳು ಮತ್ತು ಕಾಳಜಿಗಳನ್ನು ಪ್ರತಿಧ್ವನಿಸಲು ಭಾರತ ಎರಡು ದಿನದ ವರ್ಚುಯಲ್​ ಸಭೆಯನ್ನು ಆಯೋಜಿಸಿತ್ತು ಎಂದು ಶೃಂಗಸಭೆ ಮುಕ್ತಾಯದ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.

ಗುರುವಾರ ಗ್ಲೋಬಲ್ ಸೌತ್‌ನ ವಾಯ್ಸ್ ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿ ಪ್ರಾರಂಭವಾಯಿತು. 125 ದೇಶಗಳು ಇದರಲ್ಲಿ ಹೊಸದಾಗಿ ಮತ್ತು ವಿಶಿಷ್ಟ ರೀತಿಯ ಉಪಕ್ರಮದೊಂದಿಗೆ ಭಾಗಿಯಾದವು. ಗ್ಲೋಬಲ್ ಸೌತ್ ಬೆಳವಣಿಗೆಗಳಿಂದ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಶೃಂಗಸಭೆಯಲ್ಲಿ ಭಾಗಿಯಾದ ನಾಯಕರ ಮತ್ತು ಸಚಿವರ ಸಲಹೆ ಮತ್ತು ಯೋಜನೆಗಳ ಬಗ್ಗೆ ಭಾರತ ಮೌಲ್ಯವನ್ನು ಹೊಂದಿದೆ ಎಂದು ಇದೇ ವೇಳೆ ತಿಳಿಸಿದರು.

ಭಾರತ ಇದೇ ಮೊದಲ ಬಾರಿಗೆ ಜಿ20 ಅಧ್ಯಕ್ಷತೆ ವಹಿಸುತ್ತದೆ ಎಂಬುದು ಹೇಳುವುದು ತಪ್ಪಲ್ಲ. ಬಹುಶಃ ಅದು ಸಂಪೂರ್ಣ ಅಭಿವೃದ್ಧಿಶೀಲ ರಾಷ್ಟ್ರಗಳ ಭಾವನೆ ಮತ್ತು ದೃಷ್ಟಿಕೋನಗಳನ್ನು ಸೆರೆಹಿಡಿದಿದೆ ಎಂದು ಹೇಳಬಹುದು. ಗ್ಲೋಬಲ್​ ಸೌತ್​ ದೇಶಗಳ ಕಳವಳಗಳನ್ನು ಅಂತರರಾಷ್ಟ್ರೀಯ ವೇದಿಕೆಗಳ ಮೂಲಕ ಸಹಜವಾಗಿ ತಲುಪಿಸಲು ಭಾರತ ಪ್ರಯತ್ನ ಮಾಡುತ್ತಿದ್ದು, ಇದು ನಮ್ಮ ಆದ್ಯತೆ ವಿಷಯವಾಗಿದೆ ಎಂದರು.

ಶೃಂಗಸಭೆಯ ಸಮಯದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಗ್ಲೋಬಲ್​ ಸೌತ್​​ನ ಧ್ವನಿಯನ್ನು ವ್ಯಕ್ತಪಡಿಸುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಮತೋಲಿತ ಪ್ರಾತಿನಿಧ್ಯಕ್ಕಾಗಿ ಸುಧಾರಿಸುವ ಅಗತ್ಯತೆ ಇದೆ. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಮೂಲಕ ಭಾಗವಹಿಸಿದ ರಾಷ್ಟ್ರಗಳು, ಇಡೀ ಪ್ರಪಂಚದಾದ್ಯಂತ ಬಲವಾದ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ ಎಂದರು.

ಈ ಹೊಸ ಮತ್ತು ವಿಶಿಷ್ಟ ಉಪಕ್ರಮದ ಗ್ಲೋಬಲ್​ ಶೃಂಗಸಭೆಯಲ್ಲಿ ಒಟ್ಟು 125 ದೇಶಗಳು ಭಾಗವಹಿಸಿದ್ದವು. ಇವುಗಳಲ್ಲಿ ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್‌ನಿಂದ 29 ದೇಶಗಳು, ಆಫ್ರಿಕಾದಿಂದ 47 ದೇಶಗಳು, ಯುರೋಪ್‌ನಿಂದ 7 ದೇಶಗಳು, ಏಷ್ಯಾದಿಂದ 31 ದೇಶಗಳು ಮತ್ತು ಓಷಿಯಾನಿಯಾದಿಂದ 11 ದೇಶಗಳು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಶೃಂಗಸಭೆಯ ಉದ್ಘಾಟನೆ ವೇಳೆ ಭಾರತದ ಪಾತ್ರವನ್ನು ಮತ್ತು ನಿರ್ದಿಷ್ಟವಾದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಎಲ್ಲಾ ಭಾಷಣಕಾರರು ಮೆಚ್ಚಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಅನುಭವಗಳು ಮತ್ತು ಯಶಸ್ವಿ ಪರಿಹಾರ ಹಂಚಿಕೊಳ್ಳಲು ಮತ್ತು ಅಭಿವೃದ್ಧಿಯ ಸವಾಲುಗಳನ್ನು ನಿವಾರಿಸಲು ತಂತ್ರಜ್ಞಾನವನ್ನು ಹೇಗೆ ಯಶಸ್ವಿಯಾಗಿ ನಿಯೋಜಿಸುವುದು ಎಂಬುದರ ಕುರಿತು ಮೋದಿ ಅವರ ಪ್ರಸ್ತಾಪವನ್ನು ಮೆಚ್ಚಿದ್ದಾರೆ ಎಂದು ತಿಳಿಸಿದರು.

ಗ್ಲೋಬಲ್ ಸೌತ್' ಎಂಬುದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳನ್ನು ಉಲ್ಲೇಖಿಸುತ್ತದೆ. ಸಮಾರಂಭವು ಒಗ್ಗಟ್ಟಿನ ಧ್ವನಿ - ಒಗ್ಗಟ್ಟಿನ ಉದ್ದೇಶ ಆಗಿತ್ತು. ಶೃಂಗಸಭೆಯ ಅಂಗವಾಗಿ ಹತ್ತು ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಅದರಲ್ಲಿ ನಾಲ್ಕು ಸೆಷನ್‌ಗಳು ಗುರುವಾರ ನಡೆದವು. ಆರು ಸೆಷನ್​ಗಳು ಶುಕ್ರವಾರ ನಡೆದವು.

ಇದನ್ನೂ ಓದಿ: ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಜಗತ್ತು, ಅಸ್ಥಿರತೆ ಇನ್ನೂ ಎಷ್ಟು ದಿನವೋ ಗೊತ್ತಿಲ್ಲ: ಪ್ರಧಾನಿ ಮೋದಿ

ABOUT THE AUTHOR

...view details