ವಿಶ್ವದಾದ್ಯಂತ ಕಂಡುಬರುತ್ತಿರುವ ಕೊರೊನಾ ವೈರಸ್ ಹರಡುವಿಕೆ ಮತ್ತು ತಡೆಗಟ್ಟುವಲ್ಲಿ ನಮ್ಮ ಕಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ. ಕೊರೊನಾ ವೈರಸ್ ಹರಡುವ ಪ್ರಮುಖ ಮಾರ್ಗವೆಂದರೆ ಅದು ಬಾಯಿ ಅಥವಾ ಮೂಗು.
ಅಂತೆಯೇ ಈ ವೈರಸ್ ಕಣ್ಣುಗಳ ಮೂಲಕವೂ ಹರಡಿರುವ ಕೆಲ ಪ್ರಕರಣ ದಾಖಲಿಸಲಾಗಿದೆ. ಮಾರ್ಗಾವೊದ ಮದರ್ ಕೇರ್ ಆಸ್ಪತ್ರೆಯ ನೇತ್ರಶಾಸ್ತ್ರಜ್ಞ ಡಾ.ನಿಖಿಲ್ ಎಂ ಕಾಮತ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಕೆಮ್ಮು, ಸೀನಿದಾಗ ಅಥವಾ ಮಾತನಾಡುವಾಗ ವೈರಸ್‌ನ ಕಣಗಳು ನಮ್ಮ ಬಾಯಿ ಅಥವಾ ಮೂಗಿನಿಂದ ಇನ್ನೊಬ್ಬ ವ್ಯಕ್ತಿಯ ಮುಖಕ್ಕೆ ತಾಗಬಹುದು. ಈ ಸಣ್ಣ ಹನಿಗಳು ನಿಮ್ಮ ಬಾಯಿ ಅಥವಾ ಮೂಗಿನ ಮೂಲಕ ದೇಹದ ಒಳಗೆ ಸೇರುವ ಸಾಧ್ಯತೆ ಇದೆ.
ಆದರೆ, ಈ ವೈರಸ್ ಕಣ್ಣುಗಳ ಮೂಲಕವೂ ನಮ್ಮ ದೇಹ ಪ್ರವೇಶಿಸಬಹುದು. ಸೋಂಕಿಗೆ ಒಳಗಾಗುವ ಮತ್ತೊಂದು ಸಂಭಾವ್ಯ ಮಾರ್ಗವೆಂದ್ರೆ ಡೋರ್ಕ್‌ನೋಬ್, ಟೇಬಲ್ ಅಥವಾ ಕಲುಷಿತ ಮುಖವಾಡದಂತಹ ವೈರಸ್ ಇರುವ ಯಾವುದನ್ನಾದರೂ ಸ್ಪರ್ಶಿಸಿದ ನಂತರ ನಮ್ಮ ಕಣ್ಣುಗಳನ್ನು ಸ್ಪರ್ಶಿಸಿದ್ರೆ ವೈರಸ್ ತಾಗಬಹುದು.
ವಿಶ್ವದಾದ್ಯಂತ ಆರೋಗ್ಯ ಅಧಿಕಾರಿಗಳ ಪ್ರಕಾರ ಕೊರೊನಾ ವೈರಸ್ ಹೊಂದಿರುವ ಸುಮಾರು ಶೇ.1ರಿಂದ 3ರಷ್ಟು ಜನರಲ್ಲಿ ಕಾಂಜಂಕ್ಟಿವಿಟಿಸ್ (ಗುಲಾಬಿ ಬಣ್ಣ) ಉಂಟಾಗಬಹುದು. ಸೋಂಕಿತ ವ್ಯಕ್ತಿಯು ತನ್ನ ಕಣ್ಣನ್ನು ಉಜ್ಜಿದಾಗ, ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಮುಟ್ಟಿದ್ರೆ, ವೈರಸ್ ಸೋಂಕು ತಗಲುತ್ತದೆ ಎಂದು ಹೇಳಬಹುದು.
ಕಣ್ಣಿನ ಗುಲಾಬಿ ಬಣ್ಣ ರೋಗಿಯಲ್ಲಿ ವೈರಸ್ ತೀವ್ರತೆ ತಿಳಿಸುತ್ತದೆ. ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಸ್ವಚ್ಛಗೊಳಿಸಿ. ಕೈತೊಳೆಯದೇ ಯಾವುದನ್ನೂ ಮುಟ್ಟದೇ ನಿಮ್ಮ ಬಾಯಿ, ಕಣ್ಣು ಅಥವಾ ಮೂಗನ್ನು ಮುಟ್ಟಬೇಡಿ.
ವಾಸ್ತವವಾಗಿ ಚೀನಾದ ವುಹಾ್ನ್ನಿಂದ ಕೊರೊನಾ ವೈರಸ್ ಹರಡಲು ಪ್ರಾರಂಭಿಸಿದಾಗ, ಈ ರೋಗದ 2 ಲಕ್ಷಣಗಳು ಮುಖ್ಯವೆಂದು ಪರಿಗಣಿಸಲಾಗಿದೆ. ಈ ಲಕ್ಷಣಗಳು ಒಣ ಕೆಮ್ಮು, ಕೆಮ್ಮು, ಜ್ವರ ವೈರಸ್ ಹರಡುತ್ತಿದ್ದಂತೆ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ನಿಮ್ಮ ಕಣ್ಣುಗಳು ಗುಲಾಬಿ ಬಣ್ಣದಾಗಿದ್ದರೂ ಸಹ, ನೀವು ಇನ್ನು ಕೊರೊನಾ ವೈರಸ್‌ನ ಲಕ್ಷಣಗಳನ್ನು ಪಡೆಯಬಹುದು.
ಇದನ್ನು ಓದಿ:ಮೊದಲು ಆರೋಗ್ಯ ಇಲಾಖಾ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್: ಕೇಂದ್ರ ಆರೋಗ್ಯ ಸಚಿವಾಲಯ
ಕಣ್ಣುಗಳ ಮೂಲಕ ಹರಡುವುದನ್ನು ಕಡಿಮೆಗೊಳಿಸುವ ಸಲುವಾಗಿ, ಸಾಮಾಜಿಕ ಅಂತರ, ನಿಮ್ಮ ಕಣ್ಣನ್ನು ಉಜ್ಜುವುದನ್ನು ಕಡಿಮೆ ಮಾಡಿ, ಕಣ್ಣಿಗೆ ಕನ್ನಡಕವನ್ನು ಹಾಕಿ, ಕಣ್ಣನ್ನು ಉಜ್ಜಬೇಕಾದ್ರೆ ಟಿಶ್ಯೂ ಪೇಪರ್ ಬಳಸಬಹುದಾಗಿದೆ.
ಒಣಗಿದ ಕಣ್ಣುಗಳು ಹೆಚ್ಚು ಉಜ್ಜುವಿಕೆಗೆ ಕಾರಣವಾಗಬಹುದು. ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ತೊಳೆದು, ನಂತರ ಸ್ಯಾನಿಟೈಸರ್ ಬಳಸುವುದು ಸೂಕ್ತ.
ಇದರಿಂದ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದಾಗಿದೆ. ನೀವು ತಿನ್ನುವ ಮೊದಲು ಕೈಗಳನ್ನು ತೊಳೆಯಬೇಕು, ರೆಸ್ಟ್ ರೂಮ್ಗೆ ಹೋಗಿದ ನಂತರ, ಸೀನುವುದು, ಕೆಮ್ಮುವುದು ಅಥವಾ ಮೂಗು ಉಜ್ಜುವುದು ಮತ್ತು ನಿಯಮಿತವಾಗಿ ನಿಮ್ಮ ಮುಖ ಮುಟ್ಟುವುದನ್ನು ತಪ್ಪಿಸಿ.
ಕಾಂಟ್ಯಾಕ್ಟ್ ಲೆನ್ಸ್ ಧರಿಸಿದವರು ಮಾಮೂಲಿ ವ್ಯಕ್ತಿಗಿಂತ ಹೆಚ್ಚಾಗಿ ತಮ್ಮ ಕಣ್ಣುಗಳನ್ನು ಸ್ಪರ್ಶಿಸುತ್ತಾರೆ ಎಂದು ಗಮನಿಸಲಾಗಿದೆ. ಸ್ವಲ್ಪ ಸಮಯದವರೆಗೆ ಕನ್ನಡಕವನ್ನು ಬದಲಿಸುವುದನ್ನು ಕಡಿಮೆ ಮಾಡಿ. ಕನ್ನಡಕ ಅಥವಾ ಸುರಕ್ಷತಾ ಕನ್ನಡಕಗಳನ್ನು ಧರಿಸುವುದರಿಂದ ನೀವು ಆರೋಗ್ಯವಂತರಾಗಿ ಇರಬಹುದು.
ಈ ಎಲ್ಲದರ ಹೊರತಾಗಿ ಕೊರೊನಾ ವೈರಸ್ ರೋಗಿಗಳಲ್ಲಿ ಇನ್ನು ಅನೇಕ ರೀತಿಯ ಲಕ್ಷಣಗಳು ಕಂಡು ಬರುತ್ತವೆ. ಇದರಲ್ಲಿ ವಾಸನೆ ಮತ್ತು ರುಚಿಯ ಸಾಮರ್ಥ್ಯವು ಸೇರಿರಬಹುದು. ನೋಯುತ್ತಿರುವ ಗಂಟಲಿನ ಜತೆಗೆ ಕಣ್ಣಿನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗುವುದು ಇದರ ಲಕ್ಷಣಗಳಲ್ಲಿ ಸೇರಿದೆ.